ಗ್ರೇಟ್ ರಿಸೆಶನ್ ಮಟ್ಟವನ್ನೂ ಮೀರಿಸುತ್ತಿದೆ ಟೆಕ್‌ ವಲಯದ ವಜಾಗೊಳಿಸುವಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೋವಿಡ್‌ ನಂತರದ ಆರ್ಥಿಕ ಹಿಂಜರಿಕೆಯ ಕಾರ್ಮೋಡ ಇಡೀ ಜಗತ್ತನ್ನು ಆವರಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಟೆಕ್‌ ವಲಯದ ದೊಡ್ಡ ದೊಡ್ಡ ದಿಗ್ಗಜ ಕಂಪನಿಗಳು ಜಾಗತಿಕವಾಗಿ ತಮ್ಮ ಉದ್ಯೋಗಿಗಳನ್ನು ವಜಾಗೊಳಿಸತೊಡಗಿವೆ. ಟ್ವಿಟರ್‌, ಮೆಟಾ, ಅಮೇಜಾನ್‌ ಹೀಗೆ ದೊಡ್ಡ ದೊಡ್ಡ ಕಂಪನಿಗಳೇ ಸಾವಿರ ಸಾವಿರ ಸಂಖ್ಯೆ ಯಲ್ಲಿ ತಮ್ಮ ಉದ್ಯೋಗಿಗಳಿಗೆ ಗೇಟ್‌ ಪಾಸ್‌ ನೀಡುತ್ತಿವೆ. ಈ ವರ್ಷ ನಡೆಯುತ್ತಿರುವ ವಜಾಗೊಳಿಸುವಿಕೆಯ ಮಟ್ಟವು 2007-2009ರ ನಡುವಿನ ಗ್ರೇಟ್‌ ರಿಸೇಷನ್‌ ಕಾಲಘಟ್ಟವನ್ನು ಈಗಾಗಲೇ ಮೀರಿಸಿದ್ದು 2023ರ ಆರಂಭದಲ್ಲಿ ಇದು ಇನ್ನೂ ಕೆಟ್ಟದಾಗಲಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ವರದಿಯೊಂದರ ಪ್ರಕಾರ 2008 ರಲ್ಲಿ, ಟೆಕ್ ಕಂಪನಿಗಳು ಸುಮಾರು 65,000 ಉದ್ಯೋಗಿಗಳನ್ನು ವಜಾಗೊಳಿಸಿದವು ಮತ್ತು 2009 ರಲ್ಲಿ ಇದೇ ಸಂಖ್ಯೆಯಲ್ಲಿ ಕಾರ್ಮಿಕರು ತಮ್ಮ ಜೀವನೋಪಾಯವನ್ನು ಕಳೆದುಕೊಂಡರು. ಆದರೆ ಈ ವರ್ಷ ಈ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಹೋಲಿಕೆ ಮಾಡಿದರೆ, ಈ ವರ್ಷದಲ್ಲಿ 965 ಟೆಕ್ ಕಂಪನಿಗಳು ಜಾಗತಿಕವಾಗಿ 150,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ, ಇದು 2008-09ರ ನಡುವಿನ ಗ್ರೇಟ್‌ ರಿಸೇಷನ್‌ ಮಟ್ಟವನ್ನು ಮೀರಿಸಿದೆ.

ಜಾಗತಿಕ ಸ್ಥೂಲ ಆರ್ಥಿಕ ಪರಿಸ್ಥಿತಿಗಳ ಕಾರಣದಿಂದ ಮೆಟಾ, ಅಮೆಜಾನ್, ಟ್ವಿಟರ್, ಮೈಕ್ರೋಸಾಫ್ಟ್, ಸೇಲ್ಸ್‌ಫೋರ್ಸ್ ಮತ್ತು ಇತರ ಕಂಪನಿಗಳೂ ಸೇರಿದಂತೆ ನಡೆಯುತ್ತಿರುವ ವಜಾಗೊಳಿಸುವಿಕೆಯು ಮುಂದಿನ ವರ್ಷ ಇನ್ನಷ್ಟು ಹದಗೆಡಲಿದೆ. ಮಾರ್ಕೆಟ್‌ವಾಚ್ ವರದಿಯ ಪ್ರಕಾರ, ಕಂಪನಿಗಳು ತಮ್ಮ ಕಾರ್ಯಸಾಧ್ಯತೆಯನ್ನು ಉಳಿಸಿಕೊಳ್ಳಲು 2023ರವರೆಗೂ ವಜಾಗೊಳಿಸುವಿಕೆಯನ್ನು ಮುಂದುವರೆಸಬಹುದು ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!