POSITIVE STORY | ಕೃಷಿಯಲ್ಲೂ ಸೈ ಎನಿಸಿಕೊಂಡ ಟೆಕ್ಕಿ ದಂಪತಿ

-ರಾಚಪ್ಪಾ ಜಂಬಗಿ

ಕಲಬುರಗಿ ವಿಜ್ಞಾನಿಗಳ ನೆರವಿನಿಂದಾಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹೂವಿನಹಳ್ಳಿ ಗ್ರಾಮದ ಇಂಜಿನಿಯರ್ ದಂಪತಿ ತಮ್ಮ 18 ಎಕರೆಯ ಹೊಲದಲ್ಲಿ ಕೀಟನಾಶಕ, ಪೋಷಕಾಂಶಗಳ ಸಮಗ್ರ ನಿರ್ವಹಣೆಯ ಮೂಲಕ 22 ಗುಂಟೆಯ ಜಾಗದಲ್ಲಿ ಹಸಿ ಮೆಣಸಿನಕಾಯಿ ಬೆಳೆದು ಬರೊಬ್ಬರಿ 2,80,000 ರೂಪಾಯಿ ಆದಾಯ ಗಿಟ್ಟಿಸಿಕೊಳ್ಳುವುದರ ಮೂಲಕ ಇಂಜಿನಿಯರ್ ಗಳಿಗೆ ಹಾಗೂ ರೈತರಿಗೆ ಮಾದರಿಯಾಗಿದ್ದಾರೆ.

ಕಲಬುರಗಿ ಜಿಲ್ಲೆಯ ಅಫಜಲಪುರ್ ತಾಲೂಕಿನ ಹೂವಿನಹಳ್ಳಿ ಗ್ರಾಮದ ಸೀಮಾ ಕುಂಬಾರ (ಆರ್ಕಿಟೆಕ್ಚರ್ ಇಂಜಿನಿಯರ್) ಹಾಗೂ ಹೀರ್ ಕುಂಬಾರ (ಬಿ.ಇ.ಸಾಫ್ಟವೇರ್ ಇಂಜಿನಿಯರ್) ದಂಪತಿ ಬೆಂಗಳೂರಿನಲ್ಲಿ ಮಾಡುತ್ತಿದ್ದರು. ಆದರೆ ಇದೀಗ ಹಿರ್ ಕುಂಬಾರ ಒಬ್ಬರೇ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊರೋನಾ ಕಾರಣಾಂತರದಿಂದ ವರ್ಕ ಫ್ರಾಮ್ ಹೋಮ್ ಅವಕಾಶ ಸಿಕ್ಕ ಸಂದರ್ಭದಲ್ಲಿ,ಅದರ ಸದುಪಯೋಗ ಪಡೆದು ಕಳೆದ 2 ವರ್ಷದ ಅವಧಿಯಲ್ಲಿ ತಮ್ಮ ಜ್ಞಾನ ಉಪಯೋಗಿಸಿಕೊಂಡು ತಮ್ಮ ಒಟ್ಟು 18 ಎಕರೆಯ ಹೊಲದಲ್ಲಿ 3 ಎಕರೆ ಒಣ ಮೆಣಸಿನಕಾಯಿ, 22 ಗುಂಟೆಯ ಜಾಗದಲ್ಲಿ ಹಸಿ ಮೆಣಸಿನಕಾಯಿ ಸುಮಾರು 38,000 ರೂಪಾಯಿ ಖರ್ಚು ಮಾಡಿ ಬೆಳೆದಿದ್ದಾರೆ. ವರ್ಷವಿಡಿ ಬೆಳೆದ ಹಸಿ ಮೆಣಸಿನಕಾಯಿ ಮೂಲಕ ಬರೋಬ್ಬರಿ 2,80,000 ಆದಾಯ ಪಡೆದಿದ್ದಾರೆ.

ಕುಂಬಾರ ಟೆಕ್ಕಿ ದಂಪತಿಗಳು ನಿರಂತರವಾಗಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಜಹೀರ್ ಅವರೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಬೆಳೆಗಳ ಸಮಗ್ರ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡುವುದರ ಮೂಲಕ ಎರಡು ವರ್ಷದಲ್ಲಿ 3 ಲಕ್ಷದ ಸಮೀಪ ಆದಾಯ ಪಡೆದುಕೊಂಡಿದ್ದಾರೆ. ಮೆಣಸಿನಕಾಯಿ ಜೊತೆಗೆ ಇತರೆ ಬೆಳೆಗಳಾದ ತೊಗರಿ, ಕಬ್ಬು, ಹತ್ತಿ, ಶುಂಠಿ ಸೇರಿದಂತೆ ಇತರೆ ಬೆಳೆ, ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

ಕೃಷಿ ಬಗ್ಗೆ ಮೊದಲಿನಿಂದಲೂ ಬಹಳ ಆಸಕ್ತಿ. ಸರ್ವೇ ಸಾಮಾನ್ಯವಾಗಿ ಕೃಷಿಯಲ್ಲಿ ನಷ್ಟ ಇದೆ ಎಂದು ಹೇಳುತ್ತಾರೆ. ಆದರೆ, ನನಗಂತೂ ಇದರಲ್ಲಿ ನಷ್ಟ ಕಂಡುಬಂದಿಲ್ಲ. ಕೃಷಿ ಇರುವುದೇ ಲಾಭಕ್ಕಾಗಿ. ಹೀಗಾಗಿ ಬೆಳೆಗಳ ಸಮಗ್ರ ಮಾಹಿತಿ, ಅದರ ನಿರ್ವಹಣೆ ಬಗ್ಗೆ ಗಮನ ನೀಡಿದರೆ, ಕೃಷಿಯಲ್ಲಿ ಅಧಿಕ ಲಾಭ ಪಡೆಯಬಹುದು.
– ಸೀಮಾ ಹೀರ್ ಕುಂಬಾರ. ಸಾಫ್ಟ್‌ವೇರ್ ಇಂಜಿನಿಯರ್, ಕಲಬುರಗಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!