ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ನಾಯಕಿ ಹಾಗೂ ರಾಜ್ಯ ಪರಿಸರ ಮತ್ತು ಪಶುಸಂಗೋಪನಾ ಸಚಿವೆ ಪಂಕಜಾ ಮುಂಡೆ ಚುನಾವಣಾ ಪ್ರಚಾರಕ್ಕೆ ತೆರಳುವ ವೇಳೆ ಅವರು ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದ್ದು, ಲಾತೂರ್‌ಗೆ ತೆರಳುವ ಯೋಜನೆಯನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.
ಜಿಲ್ಲಾ ಚುನಾವಣಾ ಪ್ರಚಾರದ ಭಾಗವಾಗಿ ಪಂಕಜಾ ಮುಂಡೆ ಅವರು ಛತ್ರಪತಿ ಸಂಭಾಜಿನಗರದಿಂದ ಲಾತೂರ್‌ಗೆ ಹೊರಡಲು ಸಿದ್ಧರಾಗಿದ್ದರು. ಆದರೆ ಹಾರಾಟ ಆರಂಭಕ್ಕೂ ಮುನ್ನ ಪೈಲಟ್ ಹೆಲಿಕಾಪ್ಟರ್‌ನಲ್ಲಿ ದೋಷವಿರುವುದನ್ನು ಗಮನಿಸಿ ಮಾಹಿತಿ ನೀಡಿದರು. ಸುರಕ್ಷತೆಯ ದೃಷ್ಟಿಯಿಂದ ತಕ್ಷಣವೇ ಪ್ರಯಾಣ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.
ಇದನ್ನೂ ಓದಿ:
ಸೋಮವಾರ ಪಿಶೋರ್, ಘಟನಂದ್ರ, ಚೌಕಾ, ಅಡ್ಗಾಂವ್, ಬಜನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸಿದ ಬಳಿಕ ಅವರು ಸಂಭಾಜಿನಗರದಲ್ಲೇ ತಂಗಿದ್ದರು. ಮಂಗಳವಾರ ಲಾತೂರ್, ಧಾರಶಿವ ಮತ್ತು ಸೋಲಾಪುರ ಜಿಲ್ಲೆಗಳಲ್ಲಿ ಸರಣಿ ಸಭೆಗಳು ನಿಗದಿಯಾಗಿದ್ದರೂ, ತಾಂತ್ರಿಕ ಸಮಸ್ಯೆಯ ಕಾರಣ ಅವುಗಳನ್ನು ರದ್ದುಪಡಿಸಲಾಗಿದೆ.
ಹಾರಾಟಕ್ಕೂ ಮುನ್ನ ದೋಷ ಪತ್ತೆಯಾಗಿರುವುದರಿಂದ ಯಾವುದೇ ಅಪಾಯ ತಪ್ಪಿದಂತಾಗಿದೆ. ಮುಂದಿನ ದಿನಗಳಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ಮರುನಿಗದಿ ಮಾಡಲಾಗುವುದು ಎಂದು ತಿಳಿದುಬಂದಿದೆ.



