ಟೀಂಗೆ ಶುಭ್‌ಮನ್ ವಾಪಾಸ್? ಅಹಮದಾಬಾದ್‌ಗೆ ಬಂದಿಳಿದ ಗಿಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನವೇ ಟೀಂನ ಸ್ಟಾರ್ ಪ್ಲೇಯರ್ ಶುಭ್‌ಮನ್‌ಗಿಲ್‌ಗೆ ಡೆಂಗ್ಯೂ ಸೋಂಕು ತಗುಲಿತ್ತು.

ನಿನ್ನೆಯಷ್ಟೇ ಆಸ್ಪತ್ರೆಯಿಂದ ಗಿಲ್ ಡಿಸ್ಚಾರ್ಜ್ ಆಗಿದ್ದು, ಇಂದು ತಂಡವನ್ನು ಸೇರಲಿದ್ದಾರೆ ಎನ್ನಲಾಗಿದೆ. ಟೀಂ ಇಂಡಿಯಾ ಸದ್ಯ ಅಹಮದಾಬಾದ್‌ನಲ್ಲಿದೆ. ಇದೀಗ ಶುಭ್‌ಮನ್ ಕೂಡ ಅಹಮದಾಬಾದ್ ತಲುಪಿದ್ದಾರೆ.

ಮೊದಲ ಎರಡು ಪಂದ್ಯದಿಂದ ಗಿಲ್ ಹೊರಗುಳಿದಿದ್ದು, ಇದೀಗ ಪಾಕಿಸ್ತಾನ ವಿರುದ್ಧದ ಮ್ಯಾಚ್‌ಗೆ ಗಿಲ್ ಲಭ್ಯವಾಗುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!