ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗ್ನೇಯ ಮತ್ತು ನೈಋತ್ಯ ಅರೇಬಿಯನ್ ಸಮುದ್ರದಲ್ಲಿ ವಾಯುಭಾರ ಕುಸಿತಕ್ಕೆ ಚಂಡಮಾರುತ ಎಂಟ್ರಿ ಪಡೆದುಕೊಂಡಿದ್ದು, ಶನಿವಾರ ಬೆಳಗ್ಗೆ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department – IMD) ಶುಕ್ರವಾರ ಎಚ್ಚರಿಸಿದೆ.
ಹಿಂದೂ ಮಹಾ ಸಾಗರದಲ್ಲಿ ಸೃಷ್ಟಿಯಾಗುವ ಚಂಡುಮಾರುತಗಳಿಗೆ ನಾಮಕರಣ ಮಾಡುವ ಪ್ರಕ್ರಿಯೆಯ ಭಾಗವಾಗಿ ಭಾರತವು, ಈ ಚಂಡಮಾರುತಕ್ಕೆ ‘ತೇಜ್’ ಎಂದು ಹೆಸರಿಟ್ಟಿದೆ. ತೇಜ್ ಏನಾದರೂ ತನ್ನ ಪಥವನ್ನು ಬದಲಿಸಿದರೆ, ಮುಂಬೈ ಕರಾವಳಿ (Mumbai Coast) ತೀವ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಭಾನುವಾರ ಹೊತ್ತಿಗೆ ಚಂಡಮಾರುತವು ತೀವ್ರ ಸ್ವರೂಪಡೆಯುವ ಸಾಧ್ಯತೆ ಇದ್ದು, ಓಮನ್ ಮತ್ತು ನೆರೆಯ ಯೆಮೆನ್‌ನ ದಕ್ಷಿಣ ಕರವಾಳಿಯತ್ತ ಸಾಗುವ ಸಾಧ್ಯತೆಯಿದೆ.