ತೆಲಂಗಾಣ ವಿಧಾನಸಭಾ ಚುನಾವಣೆ: ಭದ್ರತೆಗಾಗಿ ಒಂದು ಲಕ್ಷ ಪೊಲೀಸರ ನಿಯೋಜನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಳೆ ತೆಲಂಗಾಣ ವಿಧಾನಸಭೆ ಚುನಾವಣಾ ಮತದಾನ ನಡೆಯಲಿದ್ದು, ರಾಜ್ಯದ 119 ಕ್ಷೇತ್ರಗಳಲ್ಲಿ ಅಧಿಕಾರಿಗಳು ಸಕಲ ವ್ಯವಸ್ಥೆ  ಪೂರ್ಣಗೊಳಿಸಿದ್ದಾರೆ. ಗುರುವಾರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, 13 ಸಮಸ್ಯಾತ್ಮಕ ಕ್ಷೇತ್ರಗಳಲ್ಲಿ ಮಾತ್ರ ಬೆಳಗ್ಗೆ 7ರಿಂದ 4ರವರೆಗೆ ಮತದಾನ ನಡೆಯಲಿದೆ. ಕಾನೂನು ಸುವ್ಯವಸ್ಥೆ ಪಾಲಿಸಲು ರಾಜ್ಯಾದ್ಯಂತ ಒಂದು ಲಕ್ಷ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ಭಾರೀ ಪೊಲೀಸ್ ಭದ್ರತೆ
ಪೊಲೀಸ್ ಕಣ್ಗಾವಲಿನಲ್ಲಿ ಚುನಾವಣಾ ಮತದಾನ ನಡೆಯಲಿದೆ. ರಾಜ್ಯ ಪೊಲೀಸರ ಜತೆಗೆ ಕೇಂದ್ರ ಪಡೆಗಳು ಫೀಲ್ಡ್‌ನಲ್ಲಿವೆ.

ನಕ್ಷಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತೆ

ಪ್ರಕ್ಷುಬ್ಧ ಪ್ರದೇಶಗಳು ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. 375 ಕೇಂದ್ರೀಯ ಪಡೆಗಳ ತೆಲಂಗಾಣ ಚುನಾವಣಾ ಕರ್ತವ್ಯದಲ್ಲಿವೆ.

ಭದ್ರತಾ ಸಿಬ್ಬಂದಿಯ ನಿಯಂತ್ರಣದಲ್ಲಿ ಮತದಾನ ಕೇಂದ್ರಗಳು ಮತ್ತು ಸ್ಟ್ರಾಂಗ್ ರೂಂಗಳು

ಸಮಸ್ಯೆ ಇರುವ ಪ್ರದೇಶಗಳಿಗೆ 4 ಸಾವಿರದ 400 ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗಡಿ ಭದ್ರತಾ ಪಡೆ, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್, ಇಂಡೋ-ಟೆಬಿಟನ್ ಬಾರ್ಡರ್ ಪೋಲೀಸ್, ನ್ಯಾಷನಲ್ ಸೆಕ್ಯುರಿಟಿ ಗಾರ್ಡ್‌ಗಳು ಭದ್ರತಾ ಕರ್ತವ್ಯದಲ್ಲಿ ಇರಲಿದ್ದು, ಮತದಾನ ಕೇಂದ್ರಗಳು ಮತ್ತು ಸ್ಟ್ರಾಂಗ್ ರೂಂಗಳನ್ನು ಭದ್ರತಾ ಸಿಬ್ಬಂದಿ ವಹಿಸಿಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!