ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ 2024ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಇಂದು (ಬುಧವಾರ) ಮಧ್ಯಾಹ್ನ 1.19 ಕ್ಕೆ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಮೂಲಗಳು ವರದಿ ಮಾಡಿವೆ.
ತೆಲಂಗಾಣ ಭವನದಲ್ಲಿ ನಡೆಯಲಿರುವ ಟಿಆರ್‌ಎಸ್ ಪಕ್ಷದ ನಾಯಕರ ಸಭೆಯಲ್ಲಿ ಈ ಘೋಷಣೆ ಮಾಡಲಾಗುವುದು ಎನ್ನಲಾಗಿದೆ.
ರಾಜ್ಯದಲ್ಲಿರುವ ಬಹುತೇಕ ಕ್ರಿಶ್ಚಿಯನ್ ಮುಖಂಡರು ಆಡಳಿತಾರೂಢ ಟಿಆರ್‌ಎಸ್ ಗೆ ತಮ್ಮ ಬೆಂಬಲ ನೀಡುವುದಾಗಿ ಘೋಷಿಸಿದ್ದು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ರಾಷ್ಟ್ರೀಯ ರಂಗಕ್ಕೆ ಪ್ರವೇಶಿಸಲು ಶುಭ ಹಾರೈಸಿದ್ದಾರೆ ಎನ್ನಲಾಗಿದೆ. ಪ್ರೊಟೆಸ್ಟಂಟ್ ಚರ್ಚ್ ಆಫ್ ಸೌತ್ ಇಂಡಿಯಾ ಸೊಸೈಟಿಯ ಬಿಷಪ್ ಎಸಿ ಸೊಲೊಮನ್ ರಾಜ್ ಮಾತನಾಡಿ, ದೇವರ ಆಶೀರ್ವಾದ ಕೆಸಿಆರ್ ಮೇಲಿದೆ. ನಾವೆಲ್ಲರೂ ಅವರೊಂದಿಗೆ ಇದ್ದೇವೆ. ಅವರಂತಹ ನಾಯಕರು ದೇಶಕ್ಕೆ ಈಗ ಅಗತ್ಯವಿದೆ. ಭಾರತ ಜಾತ್ಯತೀತವಾಗಿ ಉಳಿಯಬೇಕಾದರೆ ಅದಕ್ಕೆ ಕೆಸಿಆರ್ ನಾಯಕತ್ವ ಬೇಕು ಎಂದಿದ್ದಾರೆ ಎನ್ನಲಾಗಿದೆ.