ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಜೊತೆ ಟಾಲಿವುಡ್ ಸ್ಟಾರ್ಸ್ ಇಂದು (ಡಿ.26) ಸಭೆ ನಡೆಸಿದ್ದಾರೆ. ಸಂಧಾನ ಸಭೆ ಮುಗಿದ ಬಳಿಕ ಸಿಎಂ ರೇವಂತ್ ರೆಡ್ಡಿ ಸೆನ್ಸೇಷನಲ್ ಕಮೆಂಟ್ ಮಾಡಿದ್ದಾರೆ.
ನಾಯಕ ಅಲ್ಲು ಅರ್ಜುನ್ ಹೆಸರು ಹೇಳ್ತಿದ್ದಂತೆ, ಅಲ್ಲು ಅರ್ಜುನ್ ಮೇಲೆ ಯಾಕೆ ಕೋಪಗೊಂಡಿದ್ದೇನೆ ಎನ್ನುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಾಲ್ಯದಿಂದಲೂ ನನಗೆ ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ಇಬ್ಬರನ್ನು ನೋಡಿದ್ದೇನೆ. ಅವರ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಆದ್ರೆ ಈ ಪ್ರಕರಣವೇ ಬೇರೆ ಎಂದು ಹೇಳಿದ್ದಾರೆ.
ನನಗೆ ಅವರ ಬಗ್ಗೆ ವೈಯಕ್ತಿಕ ಅಭಿಪ್ರಾಯಗಳು ಏನೇ ಇರಲಿ, ನಾನು ಕಾನೂನಿನ ಪ್ರಕಾರವೇ ನಡೆದುಕೊಳ್ಳುತ್ತೇನೆ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ.
ಹಾಲಿವುಡ್, ಬಾಲಿವುಡ್‌ನಂತಹ ಪ್ರಸಿದ್ಧ ಚಲನಚಿತ್ರೋದ್ಯಮಗಳನ್ನು ಹೈದರಾಬಾದ್‌ಗೆ ಆಕರ್ಷಿಸಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಕಾಲ್ತುಳಿತದ ಬಗ್ಗೆ ಮಾತಾಡಿದ ರೇವಂತ್ , ಸಿನಿಮಾಗಳ ಸ್ಪೆಷಲ್ ಶೀ ಏರ್ಪಡಿಸಿದಾಗ ಇಂತಹ ದುರ್ಘಟನೆಗಳು ನಡೆಯುತ್ತವೆ. ಹಾಗಾಗಿ ಸದ್ಯಕ್ಕೆ ಎಲ್ಲ ರೀತಿಯ ಸ್ಪೆಷಲ್ ಶೋಗಳನ್ನು ನಿಷೇಧಿಸಲಾಗಿದೆ ಎಂದರು. ಸೆಲೆಬ್ರಿಟಿಗಳು ತಮ್ಮ ಸ್ವಂತ ಬೌನ್ಸರ್ಗಳನ್ನು ನೇಮಿಸಿಕೊಂಡಾಗ ಬೌನ್ಸರ್ಗಳು ಜನರೊಂದಿಗೆ ಅಪಾಯಕಾರಿಯಾಗಿ ನಡೆದುಕೊಳ್ಳುವಂತಿಲ್ಲ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
ಕಮಾಂಡ್ ಕಂಟ್ರೋಲ್ ಸೆಂಟರ್ ನಲ್ಲಿ ಟಾಲಿವುಡ್ ಸೆಲೆಬ್ರಿಟಿಗಳು ಮತ್ತು ತೆಲಂಗಾಣ ಸಿಎಂ ನಡುವೆ ಚರ್ಚೆ ನಡೆಯಿತು. ವೆಂಕಟೇಶ್, ನಾಗಾರ್ಜುನ, ನಿತಿನ್, ಕಿರಣ್ ಅಬ್ಬಾವರಂ, ಶಿವ ಬಾಲಾಜಿ, ಸಿದ್ದು ಜೊನ್ನಲಗಡ್ಡ ಇದ್ದರು. ನಿರ್ದೇಶಕರಾದ ತ್ರಿವಿಕ್ರಮ್, ಕೊರಟಾಲ ಶಿವ, ವಂಶಿಪೈಡಿಪಲ್ಲಿ, ಅನಿಲ್ ರಾವಿಪುಡಿ, ಬೋಯಪಾಟಿ ಸೀನು, ವೀರಶಂಕರ್, ಹರೀಶ್ ಶಂಕರ್, ಪ್ರಶಾಂತ್ ವರ್ಮಾ, ಸಾಯಿ ರಾಜೇಶ್ ಹಾಜರಿದ್ದರು.