SHOCKING VIDEO| ತಂದೆ ಎದುರೇ ಮಗಳ ಕಿಡ್ನ್ಯಾಪ್:‌ ಸಿಸಿಟಿವಿಯಿಂದ ಘಟನೆ ಬಹಿರಂಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇವಸ್ಥಾನಕ್ಕೆ ತೆರಳಿ ಮನೆಗೆ ವಾಪಸ್ಸಾಗುತ್ತಿದ್ದ 18ರ ಹರೆಯದ ಯುವತಿಯನ್ನು ಆಕೆಯ ತಂದೆ ಎದುರೇ ಕಿಡ್ನಾಪ್ ಮಾಡಿರುವ ಘಟನೆ ತೆಲಂಗಾಣದ ಸಿರ್ಸಿಲ್ಲಾ ಜಿಲ್ಲೆಯಲ್ಲಿ ನಡೆದಿದೆ. ನಾಲ್ವರು ಅಪರಿಚಿತರ ತಂಡ ತನ್ನ ಮುಂದೆಯೇ ಮಗಳನ್ನು ಅಪಹರಿಸಿದ್ದಾಗಿ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ಹಾಗೂ ನಾಪತ್ತೆಯಾಗಿರುವ ಯುವತಿ ರಕ್ಷಿಸಲು ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಯುವತಿಯನ್ನು ಅಪಹರಿಸಿದ ನಾಲ್ವರಲ್ಲಿ ಒಬ್ಬಾತ ಆಕೆಯ ಗೆಳೆಯನಾಗಿದ್ದು, ಈ ಹಿಂದೆ ಇಬ್ಬರೂ ಮನೆಬಿಟ್ಟು ಹೋಗಿದ್ದರು ಎನ್ನಲಾಗಿದೆ. ಪರಾರಿಯಾಗಿದ್ದ ಆರೋಪದ ಮೇಲೆ ಆತನ ವಿರುದ್ಧ ಈ ಹಿಂದೆಯೂ ಪ್ರಕರಣ ದಾಖಲಾಗಿತ್ತು.

ಆರೋಪಿಗಳನ್ನು ಹಿಡಿಯಲು ಪೊಲೀಸರು ಇತರ ತಾಂತ್ರಿಕ ಸಾಕ್ಷ್ಯಗಳನ್ನು ಸಹ ಪರಿಶೀಲಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!