ಸೇವೆ ಸ್ಥಗಿತಗೊಳಿಸಿದ 104 ಸಂಖ್ಯೆಯ ಆಂಬ್ಯುಲೆನ್ಸ್‌, ಹರಾಜಿಗೆ ಜಿಲ್ಲಾಡಳಿತ ಸಿದ್ಧತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗ್ರಾಮೀಣ ಪ್ರದೇಶದ ಜನರಿಗೆ ವಿವಿಧ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದ್ದ 104 ಸೇವೆಗಳು ಇನ್ನು ಮುಂದೆ ಸ್ಥಗಿತಗೊಳ್ಳಲಿವೆ. ಫಿಕ್ಸೆಡ್ ಡೇ ಹೆಲ್ತ್ ಸರ್ವಿಸಸ್ (ಎಫ್‌ಡಿಎಚ್‌ಎಸ್) ಅಡಿಯಲ್ಲಿ ಸುಮಾರು 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 104 ವಾಹನಗಳನ್ನು ಹರಾಜು ಹಾಕಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಸರ್ಕಾರ ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಗುರುವಾರ ಆದೇಶ ಹೊರಡಿಸಿದ್ದು,

ತೆಲಂಗಾಣ ರಾಜ್ಯದಲ್ಲಿರುವ 198 ವಾಹನಗಳನ್ನು ಹರಾಜು ಹಾಕುವಂತೆ ಸರ್ಕಾರ ಸೂಚಿಸಿದೆ. 104 ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 1250 ಸಿಬ್ಬಂದಿಯನ್ನು ಸರ್ಕಾರದ ಇತರೆ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಸರ್ಕಾರ ನಿರ್ದೇಶನ ನೀಡಿದೆ. ಗ್ರಾಮೀಣ ಪ್ರದೇಶದಲ್ಲಿ ವಿಶೇಷ ವೈದ್ಯಕೀಯ ಸೇವೆಗಾಗಿ 2009 ರಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾದ 104 ಆಂಬ್ಯುಲೆನ್ಸ್ ಸೇವೆಗಳು ಗ್ರಾಮೀಣ ಪ್ರದೇಶದ ಜನರಿಗೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಜೀವನಶೈಲಿ ಬದಲಾವಣೆಗಳಿಗೆ ಉಚಿತ ಔಷಧಿಗಳನ್ನು ಒದಗಿಸುತ್ತಿತ್ತು.

ಪ್ರಸ್ತುತ ತೆಲಂಗಾಣ ರಾಜ್ಯದಲ್ಲಿ ‘ಜೀವನಶೈಲಿ ರೋಗ ತಡೆಗಟ್ಟುವಿಕೆ’ ಯೋಜನೆ ಪ್ರಾರಂಭವಾದಾಗಿನಿಂದ 104 ಸೇವೆಗಳಿಗೆ ಕೆಲಸ ಇಲ್ಲದಂತಾಗಿದೆ. ತೆಲಂಗಾಣ ಸರ್ಕಾರವು ಮುಂದಿನ ದಿನಗಳಲ್ಲಿ ಗ್ರಾಮೀಣ ದವಾಖಾನೆಗಳನ್ನು ತೆರೆಯುತ್ತಿರುವ ಕಾರಣದಿಂದ 104 ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಕಳೆದ ಆರು ತಿಂಗಳಿನಿಂದ 104 ಆಂಬುಲೆನ್ಸ್‌ಗಳು ಖಾಲಿ ಬಿದ್ದಿವೆ. ವಾಹನಗಳು ಚಲಿಸದ ಕಾರಣ ತುಕ್ಕು ಹಿಡಿದು ಹಾಳಾಗುತ್ತಿವೆ. ವಾಹನಗಳನ್ನು ಹರಾಜು ಹಾಕಿ ಸಿಬ್ಬಂದಿಯನ್ನು ಇತರೆ ಸೇವೆಗಳಿಗೆ ಬಳಸಿಕೊಳ್ಳುವಂತೆ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!