ಎನ್‌ಟಿಆರ್ ವಿಗ್ರಹ ಅನಾವರಣಕ್ಕೆ ಬ್ರೇಕ್: ಅನುಮತಿ ನಿರಾಕರಿಸಿದ ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಖಮ್ಮಂನಲ್ಲಿ ಎನ್‌ಟಿಆರ್‌ ಮೂರ್ತಿ ಅನಾವರಣಕ್ಕೆ ಬ್ರೇಕ್‌ ಸಿಕ್ಕಿದೆ. ಮೇ 28ರಂದು ಖಮ್ಮಂನಲ್ಲಿ ನಡೆಸಲು ಉದ್ದೇಶಿಸಿದ್ದ ಎನ್‌ಟಿಆರ್‌ ವಿಗ್ರಹ ಅನಾವರಣಕ್ಕೆ ತೆಲಂಗಾಣ ಹೈಕೋರ್ಟ್‌ ತಡೆ ನೀಡಿದೆ. ರಾಜ್ಯ ಸರ್ಕಾರ ವಿಗ್ರಹ ಅನಾವರಣ ಆದೇಶವನ್ನು ಸ್ಥಗಿತಗೊಳಿಸಿದ್ದು, ಈ ಹಿಂದಿನ ತಡೆಯಾಜ್ಞೆ ಮುಂದುವರಿಯಲಿದೆ ಎಂದು ಹೈಕೋರ್ಟ್ ಹೇಳಿದೆ.

ಖಮ್ಮಂನ ಲಕಾರಾಂ ಕೊಳದ ಮಧ್ಯದಲ್ಲಿ ಕೃಷ್ಣನ ರೂಪದಲ್ಲಿ ಎನ್‌ಟಿಆರ್‌ ವಿಗ್ರಹವನ್ನು ಸ್ಥಾಪಿಸದಂತೆ ಆದೇಶ ನೀಡುವಂತೆ ಕೋರಿ ಯಾದವ ಸಮುದಾಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ನಾಯಕರ ಪ್ರತಿಮೆಗಳನ್ನು ಸ್ಥಾಪಿಸುವುದು ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ವಿರುದ್ಧವಾಗಿದೆ ಎಂದು ವಾದಿಸಲಾಯಿತು.

ಸರ್ಕಾರದ ಪರವಾಗಿ ವಾದವನ್ನು ಆಲಿಸುವಾಗ ಪ್ರತಿಮೆಯಿಂದ ಕೊಳಲು ಮತ್ತು ನವಿಲುಗರಿಯನ್ನು ತೆಗೆದುಹಾಕಲಾಯಿತು ಎಂದು ಅವರು ಹೇಳಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ಸಂಪೂರ್ಣ ವಿವರಗಳೊಂದಿಗೆ ವರದಿ ಸಲ್ಲಿಸುವಂತೆ ಸರ್ಕಾರ ಮತ್ತು ಆಡಳಿತಾಧಿಕಾರಿಗಳಿಗೆ ಆದೇಶ ನೀಡಿದೆ. ಬಳಿಕ ಮುಂದಿನ ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಲಾಯಿತು. ಹೈಕೋರ್ಟ್ ಭಾನುವಾರ ನಡೆಯಬೇಕಿದ್ದ ವಿಗ್ರಹ ಅನಾವರಣಕ್ಕೆ ಬ್ರೇಕ್‌ ಬಿದ್ದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!