ತೆಲಂಗಾಣದಲ್ಲಿ ಫೋನ್ ಟ್ಯಾಪಿಂಗ್‌ ಕೇಸ್‌: ಇಂಟಲಿಜೆನ್ಸ್‌ ಬ್ಯೂರೋ ಮಾಜಿ ಮುಖ್ಯಸ್ಥ ಆರೋಪಿ ನಂ.1

 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭೆ ಚುನಾವಣೆ ಅಬ್ಬರದ ನಡುವೆ ತೆಲಂಗಾಣದಲ್ಲಿ ನಡೆದಿತ್ತು ಎನ್ನಲಾದ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ (Phone-Tapping Case) ತೆಲಂಗಾಣ ಗುಪ್ತಚರ ದಳದ ಮಾಜಿ ಮುಖ್ಯಸ್ಥ ಟಿ.ಪ್ರಭಾಕರ್ ರಾವ್ (T Prabhakhar Rao) ಅವರನ್ನು ಆರೋಪಿ ನಂ.1 ಎಂದು ಹೆಸರಿಸಲಾಗಿದೆ.

ಸದ್ಯ ಪ್ರಭಾಕರ್‌ ರಾವ್‌ ಅಮೆರಿಕದಲ್ಲಿದ್ದಾರೆ ಎಂದು ಅಂದಾಜಿಸಲಾಗಿದ್ದು, ಅವರ ವಿರುದ್ಧ ಹೈದರಾಬಾದ್ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

ಕೆ ಚಂದ್ರಶೇಖರ ರಾವ್ ನೇತೃತ್ವದ ಹಿಂದಿನ ಬಿಆರ್‌ಎಸ್ ಸರ್ಕಾರದ ಅವಧಿಯಲ್ಲಿ ಪ್ರತಿಪಕ್ಷ ನಾಯಕರ ಫೋನ್‌ಗಳನ್ನು ಅಕ್ರಮವಾಗಿ ಕದ್ದಾಲಿಕೆ ಮಾಡುವ ಮೂಲಕ ದತ್ತಾಂಶಗಳನ್ನು ಸಂಗ್ರಹಿಸಿದ ಆರೋಪದ ಮೇರೆಗೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಕಮಿಷನರ್ ಕಾರ್ಯಪಡೆಯ (ಹೈದರಾಬಾದ್ ಪೊಲೀಸ್ ವಿಭಾಗ) ಆಗಿನ ಪೊಲೀಸ್ ಉಪ ಆಯುಕ್ತ ಪಿ ರಾಧಾಕೃಷ್ಣ ಮತ್ತು ತೆಲುಗು ಟಿವಿ ಚಾನೆಲ್‌ನ ಹಿರಿಯ ಕಾರ್ಯನಿರ್ವಾಹಕರ ವಿರುದ್ಧವೂ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ.

ಇನ್ನು ಪ್ರಕರಣದಲ್ಲಿ ಈಗಾಗಲೇ ಮೂವರು ಐಪಿಎಸ್‌ ದರ್ಜೆ ಅಧಿಕಾರಿಗಳನ್ನು ಬಂಧಿಸಲಾಗಿದೆ. ಹೆಚ್ಚುವರಿ ಎಸ್ಪಿಗಳಾದ ಭುಜಂಗ ರಾವ್, ತಿರುಪತಣ್ಣ, ಮತ್ತು ಡಿವೈಎಸ್‌ಪಿ ಪ್ರಣೀತ್ ರಾವ್ ಅವರನ್ನು ಬಂಧಿಸಲಾಗಿದೆ.ಅವರನ್ನು ಭಾನುವಾರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!