ʻಮಕ್ಕಳಿಗಾಗಿ ಅಮ್ಮನ ಓಟʼ.. ಕಾಲಿಗೆ ಚಪ್ಪಲಿ ಇಲ್ಲದೇ 5ಕೆ ಓಟದಲ್ಲಿ ಗೆದ್ದ ರೈತ ಮಹಿಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕುಟುಂಬವನ್ನು ಪೋಷಿಸಲು ಸಾಹಸ ಕಾರ್ಯ ಮಾಡುವುದನ್ನು ಸಿನಿಮಾಗಳಲ್ಲಿ ಮಾತ್ರ ನೋಡುತ್ತೇವೆ. ಆದರೆ ನಿಜ ಜೀವನದಲ್ಲೂ ಅಂಥವರಿದ್ದಾರೆ, ಅದರಲ್ಲೂ ಒಬ್ಬ ರೈತ ಮಹಿಳೆಯೊಬ್ಬರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಓಟದಲ್ಲಿ ಭಾಗಿಯಾಗಿ ವಿಜೇತರಾಗಿದ್ದಾರೆ. ಯಾವುದೇ ಅನುಭವವಿಲ್ಲದೆ,  ಅಭ್ಯಾಸವಿಲ್ಲದೆ,  ಕನಿಷ್ಠ ಕಾಲಿಗೆ ಚಪ್ಪಲಿಯೂ ಇಲ್ಲದೇ 5ಕೆ ಓಟದಲ್ಲಿ ಪಾಲ್ಗೊಂಡು ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ 1 ಲಕ್ಷ ನಗದು ಬಹುಮಾನವನ್ನೂ ಗೆದ್ದಿದ್ದಾರೆ.

ಅಲ್ಲಿದ್ದವರಿಗೆಲ್ಲ ಟೀ ಶರ್ಟ್‌, ಟ್ರ್ಯಾಕ್‌ ಸೂಟ್‌, ಶೂಗಳೊಂದಿಗೆ 5K ಓಟದಲ್ಲಿ ಭಾಗವಹಿಸಲಿ ಸಿದ್ಧರಾಗಿದ್ರು. ಆದರೆ, ಈಕೆಗೆ ಇದ್ಯಾವುದೂ ಮುಖ್ಯವೆನಿಸಲಿಲ್ಲ. ಅಂದಹಾಗೆ ಆಕೆ ವೃತ್ತಿಪರ ಓಟಗಾರ್ತಿಯೂ ಅಲ್ಲ ಕನಿಷ್ಠ ಚಪ್ಪಲಿಯನ್ನೂ ಧರಿಸದೆ ಓಡುತ್ತಿದ್ದಾಳೆ. ತನ್ನ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂಬ ಹಂಬಲ ಅವರ ಮನದಲ್ಲಿ ಬಲವಾಗಿದೆ. ಅದೇ ಆಕೆಯನ್ನು ಗೆಲ್ಲುವಂತೆ ಮಾಡಿದೆ.

ಸಿದ್ದಿಪೇಟೆ ಜಿಲ್ಲೆಯ ಹುಸ್ನಾಬಾದ್ ಕ್ಷೇತ್ರದ ಮಲ್ಲಂಪಲ್ಲಿ ಗ್ರಾಮದ ರೈತ ಮಹಿಳೆ ಮಲ್ಲಂ ರಮಾ. ತೆಲಂಗಾಣ ರಾಜ್ಯ ಅವತರಣಿಕೆ ದಿನಾಚರಣೆ ನಿಮಿತ್ತ ಹುಸ್ನಾಬಾದ್ ನಲ್ಲಿ 5ಕೆ ಓಟದಲ್ಲಿ ಭಾಗವಹಿಸದ್ದರು. 30 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರು ಇದರಲ್ಲಿ ಭಾಗವಹಿಸಬಹುದು ಎಂದು ಅನೌನ್ಸ್‌ ಮಾಡಿದ ವಿಚಾರ ಆಕೆ ಕಿವಿಗೆ ಬಿದ್ದಿದೆ. ಕೂಡಲೇ ಅದರಲ್ಲಿ ಭಾಗಹಿಸಲು ನಿರ್ಧಾರ ಮಾಡಿದ್ದಾರೆ. ರಮಾ ಪ್ರತಿದಿನ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಹೊಲಕ್ಕೆ ದನಗಳನ್ನು ಮೇಯಿಸಲು ಕರೆದುಕೊಂಡು ಹೋಗುತ್ತಾಳೆ. ಇದೇ ಆಕೆಗೆ ಸಾಧನವಾಗಿದ್ದು, ಯಾವುದೇ ಆಯಾಸವಿಲ್ಲದೆ ಜಿಂಕೆ ಮರಿಯಂತೆ 5 ಕಿಲೋಮೀಟರ್ ಓಡಿದ್ದಾಳೆ. ಆಕೆಯ ಓಟ ನೋಡಿ ರೇಸ್ ಸಂಘಟಕರು ಬೆಚ್ಚಿಬಿದ್ದಿದ್ದರಂತೆ. ಆಕೆಯನ್ನು ಅಭಿನಂದಿಸಿ 1 ಲಕ್ಷ ರೂ.ಗಳ ಚೆಕ್ ನೀಡಿ ಗೌರವಿಸಲಾಯಿತು.

ರಮಾ ತನಗೆ ಸಿಕ್ಕ ಲಕ್ಷ ರೂಪಾಯಿಯನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುವುದಾಗಿ ತಿಳಿಸಿದ್ದಾರೆ. 5ಕೆ ಓಟದಲ್ಲಿ ಮೊದಲ ಮೂರು ಸ್ಥಾನ ಗಳಿಸಿದವರೂ ಮಹಿಳಾ ಕೃಷಿಕರಾಗಿದ್ದರು. ತುಂಬಾ ಕಷ್ಟಪಟ್ಟು ಅಭ್ಯಾಸ ಮಾಡಿದರೂ ಕೆಲವರಿಗೆ ಓಟದಲ್ಲಿ ಸ್ಪರ್ಧಿಸಲು ಆಗುವುದಿಲ್ಲ. ಕಾಲಿಗೆ ಚಪ್ಪಲಿ ಹಾಕದೆ 5 ಕಿ.ಮೀ ಓಡಿದ್ದಕ್ಕೆ ಇಂತಹ ರೈತ ಮಹಿಳೆಯನ್ನು ಅಭಿನಂದಿಸಲೇಬೇಕು..!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!