Wednesday, October 5, 2022

Latest Posts

ಟೆಲಿವಿಷನ್ ಪ್ರೀಮಿಯರ್ ಲೀಗ್: ಬ್ಯಾಟ್ ಬಾಲ್ ಹಿಡಿದು ಫೀಲ್ಡಿಗಿಳಿಯಲು ಸಜ್ಜಾದ ಕಿರುತೆರೆ ಕಲಾವಿದರು!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ (ಟಿಪಿಎಲ್) ಶುರುವಾಗಲಿದೆ. ಇಲ್ಲಿ ಕನ್ನಡ ಕಿರುತೆರೆ ಕಲಾವಿದರು ಬ್ಯಾಟ್ ಬಾಲ್ ಹಿಡಿದು ಫೀಲ್ಡಿಗಿಳಿಯಲಿದ್ದಾರೆ. ನಾಳೆಯಿಂದ ಮೂರು ದಿನಗಳ ಕಾಲ (18, 19, 20) ರಂದು ಟಿಪಿಎಲ್ ನಡೆಯಲಿದೆ.
ಇಂದುಟಿಪಿಎಲ್ ಜೆರ್ಸಿ ಟ್ರೋಫಿ ಬಿಡುಗಡೆ ಮಾಡಲಾಯಿತು. ಕಿರುತೆರೆ ಕಲಾವಿದರಾದ ಪದ್ಮನಾಭ್, ರಂಜಿತ್ ಕುಮಾರ್, ಅಶ್ವಸೂರ್ಯ, ಮಂಜು ಪಾವಗಡ, ವಿವಾನ್, ಹರ್ಷ ಸೇರಿದಂತೆ ತಂತ್ರಜ್ಞರು ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ.

ಬೆಂಗಳೂರಿನ ಪೆಸೆಟ್ ಕಾಲೇಜು ಗ್ರೌಂಡ್​ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ದಿ ಬುಲ್ ಸ್ಕ್ವಾಡ್, ಭಜರಂಗಿ ಲಯನ್ಸ್, ಎಂಜೆಲ್ XI, ವಿನ್ ಟೈಮ್ ರಾಕರ್ಸ್, ಅಶ್ವ ಸೂರ್ಯ ರೈಡರ್ಸ್, ಸ್ಯಾಂಡಲ್ ವುಡ್ ಕಿಂಗ್ಸ್ ಎಂಬ ಆರು ತಂಡಗಳು ಭಾಗಿಯಾಗಲಿದೆ. ಒಟ್ಟು 102 ಸೆಲೆಬ್ರಿಟಿಗಳು ಕಾರ್ಯಕ್ರಮಕ್ಕೆ ಸಾಥ್ ಕೊಡಲಿದ್ದಾರೆ. ಈ ಆರು ತಂಡಗಳಿಗೂ ಅಂಬಾಸಿಡರ್ ಹಾಗೂ ಮಾಲೀಕರಿದ್ದಾರೆ.

ದಿ ಬುಲ್ ಸ್ಕ್ವಾಡ್ ಟೀಂಗೆ ಶರತ್ ಪದ್ಮನಾಭ್ ನಾಯಕರಾಗಿದ್ದು ತಂಡದ ಒಡೆತನವನ್ನು ಮೋನಿಶ್ ಹೊತ್ತುಕೊಂಡಿದ್ದಾರೆ. ಭಜರಂಗಿ ಲಯನ್ಸ್​ಗೆ ರಂಜಿತ್ ಕುಮಾರ್ ನಾಯಕ, ಮಹೇಶ್ ಗೌಡ ಓನರ್. ಎಂಜಲ್ XI ತಂಡಕ್ಕೆ ಹರ್ಷ ಸಿಎಂ ಗೌಡ ನಾಯಕ, ಜಗದೀಶ್ ಬಾಬು ಆರ್ ಓನರ್. ವಿನ್ ಟೈಮ್ ರಾಕರ್ಸ್ ತಂಡಕ್ಕೆ ಅರ್ಜುನ್ ಯೋಗಿ ನಾಯಕ, ಅನಿಲ್ ಬಿಆರ್ ಮತ್ತು ದೇವನಾಥ್ ಓನರ್. ಅಶ್ವಸೂರ್ಯ ರೈಡರ್ಸ್ ತಂಡಕ್ಕೆ ಮಂಜು ಪಾವಗಡ ನಾಯಕ, ರಂಜಿತ್ ಕುಮಾರ್ ಓನರ್. ಸ್ಯಾಂಡಲ್ ವುಡ್ ಕಿಂಗ್ಸ್ ತಂಡಕ್ಕೆ ವಿವಾನ್ ನಾಯಕ, ದೀಪಶ್ರೀ ಮಿಸ್ಟ್ರೀ ಒಡೆತನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!