ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ನರೇಶ್: ಆ ಪ್ರಕರಣದ ತನಿಖೆ ಕುರಿತು ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲವು ಯೂಟ್ಯೂಬ್ ಚಾನೆಲ್‌ಗಳ ಮೂಲಕ ರಮ್ಯಾ ರಘುಪತಿ, ತಮ್ಮ ಹಾಗೂ ಪವಿತ್ರಾ ಲೋಕೇಶ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನರೇಶ್ ಈ ಹಿಂದೆ ಸೈಬರ್ ಕ್ರೈಂ ಪಿಎಸ್‌ನಲ್ಲಿ ದೂರು ನೀಡಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಹಾಜರುಪಡಿಸಲಾಯಿತು.

ನಾನು ನನಗಾಗಿ ಹೋರಾಟ ಮಾಡುತ್ತಿಲ್ಲ, ಚಿತ್ರರಂಗದ ಮೇಲೆ ಮಾಡುತ್ತಿರುವ ಕೆಟ್ಟ ಪ್ರಚಾರದ ವಿರುದ್ಧ ಹೋರಾಡುತ್ತಿದ್ದೇನೆ ಎಂದು ನರೇಶ್ ಹೇಳಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳ ವೈಯಕ್ತಿಕ ವಿಚಾರಗಳ ಬಗ್ಗೆ ಕೆಟ್ಟ ಪ್ರಚಾರ ಮಾಡಲಾಗುತ್ತಿದೆ, ಸೆಲೆಬ್ರಿಟಿಗಳ ವೈಯಕ್ತಿಕ ವಿಷಯಗಳಿಗೆ ಚಿತ್ರ ವಿಮರ್ಶಕರಿಗೆ ಏನು ಸಂಬಂಧ? ಎಂದು ಪ್ರಶ್ನಿಸಿದ್ದಾರೆ.  ಕೆಲವು ವಿಳಾಸವಿಲ್ಲದ ವಾಹಿನಿಗಳು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿವೆ ಎಂದು ನರೇಶ್ ದೂರಿದರು.

ಟಾಲಿವುಡ್ ನಲ್ಲಿ ಕಳೆದ ವರ್ಷ ವೈರಲ್ ಆಗಿದ್ದ ಜೋಡಿ ಹಿರಿಯ ನಟ ನರೇಶ್-ಪವಿತ್ರ ಲೋಕೇಶ್. ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದು, ಹೊರಗಡೆ ಸುತ್ತಾಡಿದ್ದು ಸಖತ್ ವೈರಲ್ ಆಗಿದೆ. ಹಾಗೂ ಮೂರನೇ ಪತ್ನಿ ರಮ್ಯಾ ಜೊತೆ ನರೇಶ್ ಜಗಳ ಬೀದಿಗೆ ಬಂದಿದೆ.  ಪವಿತ್ರಾ ಮತ್ತು ನರೇಶ್ ಹೋಟೆಲ್‌ನಲ್ಲಿ ಒಟ್ಟಿಗೆ ಇದ್ದಾಗ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದು ಸುದ್ದಿಯಲ್ಲಿದ್ದರು. ಇದೀಗ ಇಬ್ಬರೂ ಮದುವೆಯಾಗುವುದಾಗಿಯೂ ಅಧಿಕೃತವಾಗಿ ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!