ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮತ್ತೊಂದು ಶಾಕಿಂಗ್ ಕೃತ್ಯ ನಡೆದಿದ್ದು, ಪ್ರೀತಿಯನ್ನು ನಿರಾಕರಿಸಿದ ಅಪ್ರಾಪ್ತ ಬಾಲಕಿಯ ಮೇಲೆ ಯುವಕನೊಬ್ಬ ಆಸಿಡ್ ದಾಳಿ ಮಾಡಿದ್ದಾನೆ.
ರಾಮನಗರದ ಬೈಪಾಸ್ ರಸ್ತೆಯ ನಾರಾಯಣಪ್ಪ ಕೆರೆ ಬಳಿ ಘಟನೆ ನಡೆದಿದೆ. ಯುವಕ ಹಾಗೂ ಬಾಲಕಿ ಒಬ್ಬರನ್ನೊಬ್ಬರು ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಸ್ವಲ್ಪ ದಿನದ ಹಿಂದೆ ಜಗಳವಾಗಿದ್ದು, ಬಾಲಕಿ ಬ್ರೇಕಪ್ ಮಾಡಿಕೊಳ್ಳಲು ಮುಂದಾಗಿದ್ದಳು. ಆಕೆಯ ಮನವೊಲಿಸಲು ಕೆರೆ ಬಳಿ ಸಿಗುವಂತೆ ಕೇಳಿದ್ದಾನೆ.
ಆತನನ್ನು ನಂಬಿ ಬಾಲಕಿ ಕೆರೆ ಬಳಿ ಬಂದಿದ್ದಾಳೆ, ಪ್ರೀತಿಯನ್ನು ಮತ್ತೆ ಸ್ವೀಕರಿಸುವಂತೆ ಮನವೊಲಿಸಿದ್ದಾನೆ, ಇದಕ್ಕೆ ಆಕೆ ಒಪ್ಪದಿದ್ದಾಗ ಸಿಟ್ಟಿನಲ್ಲಿ ಆಸಿಡ್ ಎರಚಿ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿ ಎಡಗಣ್ಣಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.