ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ನಟಿ ಸಮಂತಾ ರುತ್ ಪ್ರಭು ಅವರ ತಂದೆ ಜೋಸೆಫ್ ಪ್ರಭು ನಿಧನರಾಗಿದ್ದಾರೆ. ನಟಿ ಇನ್‌ಸ್ಟಾದಲ್ಲಿ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
‘ನಾವು ಮತ್ತೆ ಭೇಟಿಯಾಗುವ, ಅಪ್ಪ’ ಎಂದು ಬರೆದುಕೊಂಡಿದ್ದಾರೆ. ಸಮಂತಾ ಚೆನ್ನೈನಲ್ಲಿ ಜೋಸೆಫ್ ಪ್ರಭು ಮತ್ತು ನಿನೆಟ್ ಪ್ರಭು ದಂಪತಿಗೆ ಜನಿಸಿದರು. ಸಮಂತಾ ತಂದೆ, ತೆಲುಗು ಆಂಗ್ಲೋ-ಇಂಡಿಯನ್.
ಇದೀಗ ಸಮಂತಾ ತಂದೆಯ ನಿಧನದ ಸುದ್ದಿ ಕೇಳಿ ಅಭಿಮಾನಿಗಳು ಮತ್ತು ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.