ಬುರ್ಖಾ ಧರಿಸಿ ಕದ್ದು ಮುಚ್ಚಿ ಓಡಾಡುತ್ತಿದ್ದ ದೇವಾಲಯದ ಅರ್ಚಕ ಪೊಲೀಸರ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳದ ದೇವಸ್ಥಾನದ ಅರ್ಚಕರೊಬ್ಬರು ಬುರ್ಖಾ ಹಾಕಿಕೊಂಡು ರಸ್ತೆಯಲ್ಲಿ ಅನುಮಾನಸ್ಪದವಾಗಿ ಓಡಾಡುವುದನ್ನು ಕಂಡು ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಯಿಲಾಂಡಿಯಲ್ಲಿ ಈ ಘಟನೆ ನಡೆದಿದ್ದು, ಈ ವಿಷಯ ಸ್ಥಳೀಯವಾಗಿ ಚರ್ಚೆಯಾಸ್ಪದವಾಗಿದೆ. 28ರ ಹರೆಯದ ಜಿಷ್ಣು ನಂಬೂತಿರಿ ಅವರು ಮೆಪ್ಪಯೂರ್‌ ಸಮೀಪದ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದು, ಇದೇ ತಿಂಗಳ 7ರಂದು ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾ ಧರಿಸಿ ಓಡಾಡಿದ್ದಾರೆ.

ಸ್ಥಳೀಯ ಆಟೋ ಚಾಲಕರೊಬ್ಬರು ಅರ್ಚಕ ಜಿಷ್ಣು ನಂಬೂತಿರಿ ಬುರ್ಖಾ ಧರಿಸಿರುವುದನ್ನು ಗಮನಿಸಿ, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬುರ್ಖಾ ಹಾಕಿಕೊಂಡು ತಿರುಗಾಡುತ್ತಿದ್ದ ಅರ್ಚಕ ಜಿಷ್ಣು ನಂಬೂತಿರಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ತನಗೆ ‘ಚಿಕನ್ ಪಾಕ್ಸ್’ ಬಂದಿದ್ದು, ಅದಕ್ಕಾಗಿಯೇ ಬುರ್ಖಾ ತೊಟ್ಟಿದ್ದೇನೆ ಎಂದು ಹೇಳಿದ್ದಾರೆ. ಆದರೆ ಅರ್ಚಕರ ದೇಹದಲ್ಲಿ ಯಾವುದೇ ರೋಗದ ಲಕ್ಷಣಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ಹೆಸರು, ವಿಳಾಸ ಮತ್ತಿತರ ವಿವರಗಳು ತಿಳಿದ ಪೊಲೀಸರು ಆತನ ಸಂಬಂಧಿಕರನ್ನು ಠಾಣೆಗೆ ಕರೆಸಿ, ಅರ್ಚಕನ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲ ಖಾತ್ರಿಯಾದ ಮೇಲೆ ಅರ್ಚಕ ಜಿಷ್ಣು ನಂಬೂತಿರಿ ಅವರನ್ನು ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!