SPORTS | ಲೈಫ್‌ನಲ್ಲಿ ಹಾಫ್ ಸೆಂಚುರಿ ಹೊಡೆದ ತೆಂಡೂಲ್ಕರ್, ಕ್ರಿಕೆಟ್ ದೇವರಿಗಿಂದು ಜನ್ಮದಿನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಅಭಿಮಾನಿಗಳಿಗೆ ಇಂದು ಸ್ಪೆಶಲ್ ದಿನ,ಲಿವಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರಿಗೆ ಇಂದು ಜನ್ಮದಿನದ ಸಂಭ್ರಮ.
ಲೈಫ್‌ನಲ್ಲಿ ಹಾಫ್ ಸೆಂಚುರಿ ಹೊಡೆದಿರುವ ಸಚಿನ್ ತೆಂಡೂಲ್ಕರ್ ಅವರಿಗೆ ಸೆಂಚುರಿ ಹೊಡೆಯುವಂಥ ಆರೋಗ್ಯವನ್ನು ದೇವರು ನೀಡಲಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿಯೂ ಸಚಿನ್ ತೆಂಡೂಲ್ಕರ್ ಬರ್ಥ್‌ಡೇ ಕ್ರೇಜ್ ಹೆಚ್ಚಾಗಿದ್ದು, ವಾಟ್ಸಾಪ್,ಇನ್ಸ್ಟಾಗ್ರಾಂನಲ್ಲಿ ಸಚಿನ್ ಬರ್ಥ್‌ಡೇ ಫೋಟೊಗಳೇ ತುಂಬಿ ತುಳುಕುತ್ತಿವೆ.

ಸಚಿನ್ ತಮ್ಮ ಬರ್ಥ್‌ಡೇ ದಿನ ವಿಶೇಷವಾದ ಫೋಟೊವೊಂದನ್ನು ಶೇರ್ ಮಾಡಿದ್ದು, ಟೀ ಟೈಮ್, 50 ನಾಟ್ ಔಟ್ ಎಂದು ಬರೆದುಕೊಂಡಿದ್ದಾರೆ. 24 ವರ್ಷಗಳ ಕಾಲ ಅಕ್ಷರಶ: ಕ್ರಿಕೆಟ್ ಜಗತ್ತನ್ನು ಆಳಿದ ಸಚಿನ್ ಇದೀಗ 50ನೇ ವಸಂತಕ್ಕೆ ಕಾಲಿಟ್ಟಿದ್ದು, ಕ್ರೀಡಾ ತಾರೆಯರು ಜನ್ಮದಿನಕ್ಕೆ ಶುಭಕೋರಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!