ಇಂದಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ‘ಟರ್ಮಿನಲ್-2’ ಕಾರ್ಯಾರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾವಿರಾರು ಕೋಟಿ ವೆಚ್ಚದ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ನೂತನ ಟರ್ಮಿನಲ್-2 ಇಂದು ಕಾರ್ಯಾರಂಭವಾಗಿದೆ.

ಕಳೆದ ನವೆಂಬರ್‌ನಲ್ಲಿ ಪ್ರಧಾನಿ ಮೋದಿ ಟರ್ಮಿನಲ್-2ಗೆ ಉದ್ಘಾಟನೆ ಮಾಡಿದ್ದು, ಕಾಮಗಾರಿ ಇದೀಗ ಬಹುತೇಕ ಶೇ,90ರಷ್ಟು ಮುಗಿದಿದೆ. ಕೆಂಪೇಗೌಡ ಏರ್‌ಪೋರ್ಟ್ ಆಡಳಿತ ಮಂಡಳಿ ಇಂದಿನಿಂದ ಹೈಫೈ ಏರ್‌ಪೋರ್ಟ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಿದೆ.

Kempegowda Airport: All you need to know about Bengaluru's Kempegowda  airport Terminal-2 | Bengaluru News - Times of Indiaಸಂಕ್ರಾಂತಿ ಸಂಭ್ರಮದ ಪ್ರಯುಕ್ತ ಹೊಸ ಟರ್ಮಿನಲ್ ಕಾರ್ಯಾರಂಭ ಮಾಡಿದ್ದು, ಈಗಾಗಲೇ ಹೊಸ ಟರ್ಮಿನಲ್‌ನಿಂದ ಮೊದಲ ವಿಮಾನ ಕಲ್ಬುರ್ಗಿಗೆ ಪ್ರಯಾಣ ಬೆಳೆಸಿದೆ.

Photos: Bengaluru's Terminal 2 is designed to feel like a walk in a garden  | Condé Nast Traveller Indiaಹೊಸ ಟರ್ಮಿನಲ್‌ನ ಫೋಟೊ, ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದ್ದು, ಇದೀಗ ಸಾರ್ವಜನಿಕರು ಟರ್ಮಿನಲ್ ನೋಡಲು ಅವಕಾಶ ಸಿಕ್ಕಿದೆ. ಮೊದಲ ಹಂತವಾಗಿ ಹೊಸ ಟರ್ಮಿನಲ್‌ನಲ್ಲಿ ಸ್ಟಾರ್ ಏರ್ ವಿಮಾನಗಳು ಮಾತ್ರ ಹಾರಾಡಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!