ಮಗಳ ಮದುವೆಗೆಂದು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ 18 ಲಕ್ಷ ರೂ. ಗೆದ್ದಲು ಪಾಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮ್ಮ ಮಗಳ ಮದುವೆಗಾಗಿ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ 18 ಲಕ್ಷ ರೂಪಾಯಿ ಗೆದ್ದಲು ಪಾಲಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಯುಪಿಯ ಮೊರಾದಾಬಾದ್‌ನಲ್ಲಿ ಮಹಿಳೆಯೊಬ್ಬರು ಸುಮಾರು ಒಂದೂವರೆ ವರ್ಷಗಳ ಕಾಲ ಬ್ಯಾಂಕ್ ಲಾಕರ್‌ನಲ್ಲಿ 18 ಲಕ್ಷ ರೂಪಾಯಿಗಳನ್ನು ಕೂಡಿಟ್ಟಿದ್ದರು. ಹಣಕ್ಕೆ ಗೆದ್ದಲು ಹತ್ತಿದ್ದನ್ನು ಕಂಡ ಆಕೆಗೆ ದಿಕ್ಕುತೋಚಂತಾಗಿದೆ.

ಅಲ್ಕಾ ಪಾಠಕ್ ತನ್ನ ಮಗಳ ಮದುವೆಗಾಗಿ 2022ರ ಅಕ್ಟೋಬರ್‌ನಲ್ಲಿ ಬ್ಯಾಂಕ್ ಲಾಕರ್‌ನಲ್ಲಿ ಹಣದ ಜೊತೆಗೆ ಕೆಲವು ಆಭರಣಗಳನ್ನ ಇಟ್ಟಿದ್ದರು. ವಾರ್ಷಿಕ ಲಾಕರ್ ನಿರ್ವಹಣೆ ಮತ್ತು ಕೆವೈಸಿ ಪರಿಶೀಲನೆಗಾಗಿ ಮ್ಯಾನೇಜರ್ ಅಲ್ಕಾ ಪಾಠಕ್ ಅವರನ್ನು ಬ್ಯಾಂಕ್‌ಗೆ ಕರೆಸಿಕೊಂಡು, ಮಹಿಳೆ ಲಾಕರ್ ತೆರೆದಾಗ ಘಟನೆ ಬೆಳಕಿಗೆ ಬಂದಿದೆ.

ತನ್ನ ಹಣವೆಲ್ಲಾ ಗೆದ್ದಲು ತಿಂದು ನಾಶವಾಗಿರುವುದನ್ನು ಕಂಡು ಮಹಿಳೆ ಬೆಚ್ಚಿಬಿದ್ದು, ಕೂಡಲೇ ಬ್ಯಾಂಕ್ ಶಾಖಾ ವ್ಯವಸ್ಥಾಪಕರ ಗಮನಕ್ಕೆ ತಂದರು. ಸಣ್ಣ ವ್ಯಾಪಾರ ಮತ್ತು ಟ್ಯೂಷನ್ ತರಗತಿಗಳನ್ನು ನಡೆಸುತ್ತಿರುವ ಅಲ್ಕಾ ಪಾಠಕ್ ತನ್ನ ಉಳಿತಾಯವನ್ನು ನಗದು ಮತ್ತು ಚಿನ್ನಾಭರಣಗಳ ರೂಪದಲ್ಲಿ ಲಾಕರ್‌ನಲ್ಲಿ ಇರಿಸಿದ್ದಳು. ಇದೀಗ ಆ ಹಣವೆಲ್ಲಾ ಗೆದ್ದಲು ಪಾಲಾಗಿದೆ.

ಲಾಕರ್‌ನಲ್ಲಿ ಹಣ ಹಾಗೂ ಚಿನ್ನಾಭರಣ ಯಾವ ರೀತಿ ಸಂಗ್ರಹಿಸಿಡಬೇಕು ಎಂಬುದು ತಮಗೆ ತಿಳಿದಲ್ಲವೆಂಬುದನ್ನು ಆಕೆಯೇ ಒಪ್ಪಿಕೊಂಡಿದ್ದಾರೆ. ಕಷ್ಟಪಟ್ಟು ದುಡಿದ ಹಣ ಈ ರೀತಿ ಹಾಳಾಗಿದ್ದಕ್ಕೆ ಮಹಿಳೆ ತಮ್ಮ ದುಃಖವನ್ನು ಹೊರಹಾಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!