ಹೊಸದಿಗಂತ ವರದಿ ವಿಜಯಪುರ:
ಟ್ರಕ್ ಹಾಗೂ ಬೈಕ್ ಡಿಕ್ಕಿಯಾಗಿ ಯುವ ವಕೀಲರೊಬ್ಬ ಸ್ಥಳದಲ್ಲಿ ಸಾವಿಗೀಡಾದ ಘಟನೆ ನಗರ ಹೊರ ವಲಯದ ಬೆಂಗಳೂರು ರಸ್ತೆಯ ಟೋಲ್ ನಾಕಾ ಬಳಿ ನಡೆದಿದೆ.
ಮಹಲ್ ಐನಾಪುರ ಗ್ರಾಮದ ಯಲ್ಲಪ್ಪ ಬಳಗಾನೂರ (32) ಮೃತಪಟ್ಟ ದುರ್ದೈವಿ. ಯಲ್ಲಪ್ಪ ಬಳಗಾನೂರ, ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿಕಿ ಮಾಡುತ್ತಿದ್ದರು. ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.