ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ರಾನ್ಸ್ ನಲ್ಲಿ ನಡೆಯುತ್ತಿದ್ದ ಏರ್ ಶೋ ವೇಳೆ ಭೀಕರ ವಿಮಾನ ಅಪಘಾತ ಸಂಭವಿಸಿದ್ದು, ಎರಡು ವಿಮಾನಗಳು ಢಿಕ್ಕಿಯಾಗಿ ಮೂರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಮಂಗಳವಾರ ಈಶಾನ್ಯ ಫ್ರಾನ್ಸ್‌ನ ವಾಯುನೆಲೆಯ ಬಳಿ ಫ್ರೆಂಚ್ ವಾಯುಪಡೆಯ ಚಮತ್ಕಾರಿಕ ತಂಡದ ಎರಡು ವಿಮಾನಗಳು ಢಿಕ್ಕಿ ಹೊಡೆದುಕೊಂಡಿವೆ. ಈ ಅಪಘಾತದಲ್ಲಿ ಮೂವರು ಪೈಲಟ್ ಗಳು ಗಾಯಗೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಕೆಳಗೆ ಬಿದ್ದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈಶಾನ್ಯ ಫ್ರಾನ್ಸ್‌ನ ಸೇಂಟ್-ಡಿಜಿಯರ್‌ನ ಪಶ್ಚಿಮದಲ್ಲಿರುವ ವಾಯುನೆಲೆಯ ಬಳಿ ನಡೆಯುತ್ತಿರುವ ಏರ್ ಶೋ ವೇಳೆ ಆಲ್ಫಾ ಜೆಟ್ ವಿಮಾನಗಳು ಡಿಕ್ಕಿ ಹೊಡೆದವು. ಒಂದು ವಿಮಾನವು ಸಿಲೋಗೆ ಡಿಕ್ಕಿ ಹೊಡೆದು ಬೆಂಕಿ ಕಾಣಿಸಿಕೊಂಡಿತು ಎಂದು ಫ್ರೆಂಚ್ ವಾಯು ಮತ್ತು ಬಾಹ್ಯಾಕಾಶ ಪಡೆ ಸುದ್ದಿ ಸಂಸ್ಥೆ ತಿಳಿಸಿದೆ.
ಇಬ್ಬರು ಪೈಲಟ್‌ಗಳು ಮತ್ತು ಒಬ್ಬ ಪ್ರಯಾಣಿಕ ವಿಮಾನದಿಂದ ಹೊರಗೆ ಹಾರಿದ್ದಾರೆಯಾದರೂ, ಅವರು ಗಾಯಗೊಂಡು ಪ್ರಜ್ಞಾಹೀನ ಪರಿಸ್ಥಿತಿಯಲ್ಲಿ ಸಿಕ್ಕಿದ್ದಾರೆ. ದುರ್ಘಟನೆಯಲ್ಲಿ ಯಾವುದೇ ನಾಗರಿಕ ಸಾವುನೋವುಗಳು ಸಂಭವಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ, ಪೂರ್ವ ಫ್ರಾನ್ಸ್‌ನಲ್ಲಿ ಎರಡು ಫ್ರೆಂಚ್ ರಫೇಲ್ ಜೆಟ್‌ಗಳು ಆಗಸದಲ್ಲೇ ಡಿಕ್ಕಿ ಹೊಡೆದು ಇಬ್ಬರು ಪೈಲಟ್‌ಗಳ ಸಾವಿಗೆ ಕಾರಣವಾಗಿತ್ತು.
Watch MOMENT French jets collide during training session
Pilots and passenger ‘found unconscious’ pic.twitter.com/SR49r6ymUX
— RT (@RT_com) March 25, 2025