October 10, 2026
Saturday, October 10, 2026
spot_img

ಉದಯಪುರದಲ್ಲಿ ಭೀಕರ ಅಪಘಾತ: ತಮಿಳು ಖ್ಯಾತ ನಿರ್ಮಾಪಕ ಆರ್‌ಬಿ ಚೌಧರಿ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ಉದಯಪುರದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ತಮಿಳು ನಟ ಜೀವಾ ಅವರ ತಂದೆ, ಸೂಪರ್ ಗುಡ್ ಫಿಲ್ಮ್ಸ್ ಸಂಸ್ಥೆಯ ನಿರ್ಮಾಪಕ ಆರ್‌ಬಿ ಚೌಧರಿ ಅವರು ಮೃತಪಟ್ಟಿದ್ದಾರೆ.

ಉದಯಪುರದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆರ್‌ಬಿ ಚೌಧರಿ ಕೊನೆಯುಸಿರೆಳೆದಿದ್ದಾರೆ. ನಾಳೆ ಚೆನ್ನೈಗೆ ಆರ್‌ಬಿ ಚೌಧರಿ ಅವರ ಪಾರ್ಥಿವ ಶರೀರವನ್ನು ತರಲಾಗುವುದು ಎಂದು ಹೇಳಲಾಗುತ್ತಿದೆ.

ರಾಜಸ್ಥಾನಿ ಮೂಲದ ಕುಟುಂಬಕ್ಕೆ ಸೇರಿದ ಆರ್‌ಬಿ ಚೌಧರಿ, ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ‘ಸೂಪರ್’ ಎಂಬ ನಿರ್ಮಾಣ ಸಂಸ್ಥೆಯನ್ನು ನಿರ್ಮಿಸಿದರು. ಈ ಸಂಸ್ಥೆಯಡಿಯಲ್ಲಿ ‘ಅಡಿಪಾಪಂ’, ‘ಲಯನಂ’, ‘ಕಲ್ಪನಾ ಹೌಸ್’ ನಂತಹ ಬಿಗ್ ಸಿನಿಮಾಗಳು ತೆರೆಕಂಡಿತ್ತು.

ಬಳಿಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದ ಅವರು, ಆರ್. ಮೋಹನ್ ಜೊತೆ ಸೇರಿ ಚಿತ್ರಗಳನ್ನು ನಿರ್ಮಿಸಿದರು. ಬಳಿಕ ಚೌಧರಿ ತಮ್ಮ ‘ಸೂಪರ್’ ಪ್ರೊಡಕ್ಷನ್ ಹೌಸ್ ಹೆಸರನ್ನು ‘ಸೂಪರ್ ಗುಡ್ ಫಿಲ್ಮ್ಸ್’ ಎಂದು ಬದಲಾಯಿಸಿ ಹಿಟ್ ಚಿತ್ರಗಳನ್ನು ನೀಡಿದರು. ತಮಿಳಿನಲ್ಲಿ ಪುದು ವಸಂತಂ, ಪುರಿಯಾದ ಪುದಿರ್, ಚೇರನ್ ಪಾಂಡಿಯನ್, ಸೂರ್ಯವಂಶಂ, ತಿರುಪ್ಪಾಚಿ, ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದಾರೆ.

Must Read