ಹೊಸದಿಗಂತ ವರದಿ ಕಲಬುರಗಿ:
ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ವಿಜಯಪುರ ಜಿಲ್ಲಾ ಸಿಂದಗಿ ತಾಲೂಕಿನ ಸಿಪಿಐ ಹಾಗೂ ಸಿಪಿಐ ಪತ್ನಿ ಸಾವಿಗೀಡಾಗಿದ್ದಾರೆ.
ಬುಧವಾರ ಮಧ್ಯಾಹ್ನ ನೆಲೋಗಿ ಕ್ರಾಸ್ ಬಳಿ ನಿಂತಿದ್ದ, ಕಂಟೇನರ್,ಗೆ ಮಾರುತಿ ಸ್ವೀಫ್ಟ್ ಡಿಸೈರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಿಪಿಐ ರವಿ ಉಕ್ಕುಂದ (43),ಪತ್ನಿ ಮಧು (40) ದುಮ೯ರಣ ಹೊಂದಿದ್ದಾರೆ.
ಸಿಂದಗಿಯಿಂದ ಕಲಬುರಗಿ ನಗರಕ್ಕೆ ಕಾರಿನಲ್ಲಿ ಆಗಮಿಸುತ್ತಿದ್ದ ಸಿಪಿಐ ದಂಪತಿಗಳು,ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ಅಫಘಾತ ಸಂಭವಿಸಿದೆ. ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು ದೌಡಾಯಿಸಿದ್ದು,ನೆಲೋಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.