ಭೀಕರ ಅಪಘಾತ: ಡಿಕ್ಕಿ ಹೊಡೆದು ಕಾರಿನ ಅಡಿಗೆ ಸಿಲುಕಿದ ಯುವತಿಯನ್ನು 12 ಕಿ.ಮೀ ಎಳೆದುಕೊಂಡು ಹೋದ ಚಾಲಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸುಲ್ತಾನ್‌ಪುರಿಯಲ್ಲಿ 20 ವರ್ಷದ ಯುವತಿಯು ಸ್ಕೂಟಿ ಓಡಿಸುವಾಗ ಕಾರು ಡಿಕ್ಕಿಯಾಗಿದೆ. ಆದ್ರೆ ಅಪಘಾತದ ಆಗಿದ್ದರೂ ಕ್ಯಾರೇ ಅನ್ನದ ಕಾರು ಚಾಲಕ ಹಾಗೆಯೇ ಕಾರು ಚಲಾಯಿಸಿದ್ದಾನೆ.

ಇದರಿಂದ ಕಾರಿನ ಅಡಿಯಲ್ಲಿ ಯುವತಿ ಸಿಲುಕಿದ್ದು, ಆಕೆಯನ್ನು 12 ಕಿ.ಮೀ ಎಳೆದುಕೊಂಡು ಹೋಗಲಾಗಿದೆ. ಇದರಿಂದಾಗಿ ಯುವತಿ ಮೃತಪಟ್ಟಿದ್ದು, ಕಾರಿನಲ್ಲಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಸುಲ್ತಾನ್‌ಪುರಿಯಲ್ಲಿ ಅಪಘಾತ ನಡೆದಿದ್ದು, ಯುವತಿಯನ್ನು ಕಂಝಾವಲ್‌ವರೆಗೆ ಎಳೆಯಲಾಗಿದೆ.

ಕಾರಿನ ಅಡಿಗೆ ಯುವತಿ ಸಿಲುಕಿರುವುದನ್ನು ಕಂಡ ಅಪರಿಚಿತರು ರೋಹಿಣಿ ಜಿಲ್ಲೆ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಭಾನುವಾರ ಬೆಳಗಿನ ಜಾವ 3.24ರ ಸುಮಾರಿಗೆ ಕರೆ ಮಾಡಿದ್ದಾರೆ. ಇದಾದ ಕೆಲ ಹೊತ್ತಿನಲ್ಲಿ ಮತ್ತೆ ಕರೆ ಬಂದಿದ್ದು, ರಸ್ತೆ ಮೇಲೆ ಯುವತಿಯ ಶವ ಬಿದ್ದಿದೆ ಎಂದು ಮಾಹಿತಿ ನೀಡಿದ್ದಾರೆ.

ಹೊಸ ವರ್ಷದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಎಲ್ಲರೂ ಮದ್ಯಪಾನ ಮಾಡಿದ್ದರು ಎಂದು ಶಂಕಿಸಲಾಗಿದೆ. ಕಾರಿನ ಸಂಖ್ಯೆ ಆಧರಿಸಿ ಐವರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!