ಹೊಸದಿಗಂತ ಡಿಜಿಟಲ್ ಡೆಸ್ಕ್:
ಟರ್ಕಿಯ ಸ್ಕೀ ರೆಸಾರ್ಟ್‌ನಲ್ಲಿರುವ ಹೋಟೆಲ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 66 ಜನರು ಸಾವನ್ನಪ್ಪಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವರು ಮಂಗಳವಾರ ಹೇಳಿದ್ದಾರೆ.
ಬೋಲು ಪ್ರಾಂತ್ಯದ ಕಾರ್ತಲ್ಕಯಾ ರೆಸಾರ್ಟ್‌ನಲ್ಲಿರುವ ಹೋಟೆಲ್‌ನಲ್ಲಿ ಮುಂಜಾನೆ 3:27 ಕ್ಕೆ (ಸ್ಥಳೀಯ ಕಾಲಮಾನ) ಬೆಳಗಿನ ಜಾವ ದುರಂತ ಸಂಭವಿಸಿದೆ ಎಂದು ಅಲಿ ಯೆರ್ಲಿಕಾಯಾ ಹೇಳಿದರು.
ಘಟನೆಯಲ್ಲಿ 51 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು.
https://x.com/nexta_tv/status/1881615569452999134/video/4
ನಾವು ಆಳವಾದ ನೋವಿನಲ್ಲಿದ್ದೇವೆ. ದುರದೃಷ್ಟವಶಾತ್ ಈ ಹೋಟೆಲ್‌ನಲ್ಲಿ ಸಂಭವಿಸಿದ ಬೆಂಕಿಯಲ್ಲಿ ನಾವು 66 ಜೀವಗಳನ್ನು ಕಳೆದುಕೊಂಡಿದ್ದೇವೆ, ”ಎಂದು ಯೆರ್ಲಿಕಾಯಾ ಸ್ಥಳವನ್ನು ಪರಿಶೀಲಿಸಿದ ನಂತರ ಸುದ್ದಿಗಾರರಿಗೆ ಆರೋಗ್ಯ ಸಚಿವ ಕೆಮಲ್ ಮೆಮಿಸೊಗ್ಲು ತಿಳಿಸಿದರು. ಗಾಯಗೊಂಡವರಲ್ಲಿ ಕನಿಷ್ಠ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು.
ಜನವರಿಯಿಂದ ಫೆಬ್ರವರಿ ಮೊದಲ ವಾರದವರೆಗೆ ಶಾಲಾ ರಜಾದಿನಗಳಿವೆ. ಈ ಹಿನ್ನೆಲೆ ಜನಪ್ರಿಯ ಚಳಿಗಾಲದ ತಾಣವಾಗಿರುವ ರೆಸಾರ್ಟ್, ಇಸ್ತಾನ್‌ಬುಲ್ ಮತ್ತು ಅಂಕಾರಾದಿಂದ ಜನರು ಸ್ಕೀಯಿಂಗ್‌ಗಾಗಿ ಬರುತ್ತಾರೆ. ಬೋಲು ಪರ್ವತಗಳಿಗೆ ಹೆಚ್ಚಿನ ಜನರು ಬಂದಿರುವಾಗಲೇ ಅಗ್ನಿ ಅವಘಡ ನಡೆದಿರುವುದು ಸಾವು-ನೋವನ್ನು ಹೆಚ್ಚಿಸಿದೆ.
ಘಟನೆಯ ಸಂದರ್ಭದಲ್ಲಿ ಸುಮಾರು 234 ಅತಿಥಿಗಳು ಹೋಟೆಲ್‌ನಲ್ಲಿ ತಂಗಿದ್ದರು ಎಂದು ಗವರ್ನರ್ ಅಬ್ದುಲಜೀಜ್ ಐಡಿನ್ ಹೇಳಿಕೆಯನ್ನು ಸರ್ಕಾರಿ ಅನಾಡೋಲು ಏಜೆನ್ಸಿ ಉಲ್ಲೇಖಿಸಿದೆ.