ಒಡಿಶಾದಲ್ಲಿ ಭೀಕರ ಪ್ರವಾಹ: 5ಲಕ್ಷಕ್ಕೂ ಹೆಚ್ಚಿದೆ ಸಂತ್ರಸ್ತರ ಸಂಖ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಳೆದ ಕೆಲದಿನಗಳ ಮಳೆಯಿಂದಾಗಿ ಒಡಿಶಾದಲ್ಲಿ ರಣಭೀಕರ ಪ್ರವಾಹ ಎದುರಾಗಿದ್ದು ಸುಮಾರು 5 ಲಕ್ಷಕ್ಕೂ ಹೆಚ್ಚಿನ ಜನಸರು ಪ್ರವಾಹದಿಂದ ಬಾಧಿತರಾಗಿದ್ದಾರೆ.

ಮೂಲಗಳ ವರದಿಯ ಪ್ರಕಾರ ಒಡಿಶಾದ 10 ಜಿಲ್ಲೆಗಳಲ್ಲಿ 1,757 ಗ್ರಾಮಗಳ 4.67 ಲಕ್ಷ ಜನರು ತೊಂದರೆಗೀಡಾಗಿದ್ದಾರೆ ಎಂದು ಸರ್ಖಾರ ಮಾಹಿತಿ ನೀಡಿದೆ.
ರಾಜ್ಯದ ಖೋರ್ಡಾ ಜಿಲ್ಲೆಯ ಪ್ರವಾಹ ಪೀಡಿತ ಅಂಧುತಿ ಗ್ರಾಮದಿಂದ ಹಲವಾರು ಗ್ರಾಮಸ್ಥರನ್ನು ರಕ್ಷಿಸಲಾಗಿದೆ. ಗುರುವಾರದಿಂದ ಮತ್ತೆ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.

ಸಂಬಲ್‌ಪುರ, ಸುವರ್ಣಪುರ, ಬೌಧ್‌, ಕಟಕ್‌, ಖುರ್ದಾ, ಜಗತ್‌ಸಿಂಗ್‌ಪುರ, ಕೇಂದ್ರಪಾರಾ ಮತ್ತು ಪುರಿ ಜಿಲ್ಲೆಗಳಲ್ಲಿ ಹಲವು ಗ್ರಾಮಗಳಲ್ಲಿ ವಸತಿ ಹಾಗೂ ಕೃಷಿ ಪ್ರದೇಶಗಳಿಗೆ ನೀರು ನುಗ್ಗಿದೆ.

425 ಗ್ರಾಮಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಜನರು ಕಂಗಾಲಾಗಿದ್ದಾರೆ, ಒಟ್ಟು 4.67 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ಬುಧವಾರದವರೆಗೆ 60,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಆಡಳಿತವಯ ಎಚ್ಚರಿಕೆ ವಹಿಸಿದ್ದು ಜನರನ್ನು ಸ್ಥಳಾಂತರಿಸುತ್ತಿದೆ ಎಂದು ವಿಶೇಷ ಪರಿಹಾರ ಆಯುಕ್ತರು ತಿಳಿಸಿದ್ದಾರೆ ಎಂದು ಮೂಲಗಳ ವರದಿ ಉಲ್ಲೇಖಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!