ಬೆಂಗಳೂರಿನಲ್ಲಿ ಭಯಂಕರ ಮಳೆ: ಮೆಟ್ರೋ ಟ್ರ್ಯಾಕ್​ ಮೇಲೆ ಬಿದ್ದ ಮರದ ಕೊಂಬೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಕ್ಕೆ ಮುಂಗಾರು ಆಗಮಿಸಿದ ಬೆನ್ನಲ್ಲೇ ಮಳೆ ಸುರಿಯಲಾರಂಭಿಸಿದೆ. ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆ ಅಸ್ತವ್ಯಸ್ತವಾಗಿತ್ತು. ಗಾಳಿ ಮಳೆಯಿಂದ ಮೆಟ್ರೋ ಟ್ರ್ಯಾಕ್​ ಮೇಲೆ ಮರದ ಕೊಂಬೆ ಬಿದ್ದಿರುವಂತಹ ಘಟನೆ ಟ್ರಿನಿಟಿ, ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ನಡುವೆ ನಡೆದಿದೆ. ಮಳೆಯಿಂದಾಗಿ ಮರದ ಕೊಂಬೆ ಬಿದ್ದ ಕಾರಣ, ಪ್ರಸ್ತುತ ಇಂದಿರಾನಗರದಿಂದ ವೈಟ್​ಫೀಲ್ಡ್​​, ​ಎಂ.ಜಿ.ರಸ್ತೆಯಿಂದ ಚಲ್ಲಘಟ್ಟ ನಡುವೆ ಮಾತ್ರ ಮೆಟ್ರೋ ರೈಲು ಸಂಚಾರ ಇರುತ್ತದೆ.

ಈ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿ ಟ್ರಾಫಿಕ್ ಅಲರ್ಟ್ ಮಾಡಿದ್ದಾರೆ. ವೆಬ್ ಜಂಕ್ಷನ್ ಬಳಿ ಮೆಟ್ರೋ ಟ್ರ್ಯಾಕ್ ಮೇಲೆ ದೊಡ್ಡ ಮರವೊಂದು ಬಿದ್ದಿದ್ದು, ಟ್ರಿನಿಟಿ ಸರ್ಕಲ್ ಕಡೆಗೆ ಸಂಚಾರ ನಿಧಾನವಾಗಲಿದೆ. ದಯವಿಟ್ಟು ಸಹಕರಿಸಿ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!