ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಯಿಲ್ಲದೆ ಬರಡಾಗಿರುವ ಕೋಟೆನಾಡದಲ್ಲಿ ಭಾರೀ ಮಳೆಯಿಂದ ತೀವ್ರ ಅವಾಂತರ ಉಂಟಾಗಿದೆ. ಭಾರೀ ಮಳೆಗೆ 10 ಮನೆಗಳಿಗೆ ಹಾನಿಯಾಗಿದ್ದು, ಐವರು ಗ್ರಾಮಸ್ಥರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಿಸಿಲಿನ ಝಳಕ್ಕೆ ತತ್ತರಿಸಿರುವ ಚಿತ್ರದುರ್ಗದ ಕೆಲವೆಡೆ ತಡರಾತ್ರಿ ವರುಣ ಆರ್ಭಟಿಸಿದ್ದಾನೆ. ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಜೋರಾದ ಗಾಳಿ ಮಳೆಗೆ ಖಾಸಗಿ ಶಾಲೆಯ ಕಬ್ಬಿಣದ ಮೇಲ್ಛಾವಣಿ ತೇಲಿ ಬಂದು ಮನೆಗಳಿಗೆ ಬಡಿದಿದೆ. ಇದರಿಂದ ಗ್ರಾಮದ ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮನೆಯ ಮೇಲ್ಛಾವಣಿ ನೆಲಕ್ಕೆ ಬಿದ್ದಿದೆ. ಗುಡುಗಿನ ಆರ್ಭಟಕ್ಕೆ ಗೋಡೆಗಳು ಕುಸಿದು ಬಿದ್ದಿದೆ.
ಮನೆಗೆ ನೀರು ನುಗ್ಗಿ ದವಸ-ಧಾನ್ಯ ನಿರುಪಾಲಾಗಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮನೆಯಲ್ಲಿದ್ದ ದವಸ ಧಾನ್ಯ ಹಾಳಾಗುವುದರ ಜೊತೆ ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ದರಿಂದ ಕೂಡಲೇ ಸರಕಾರ ನಮ್ಮ ನೆರವಿಗೆ ಬರಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.