ಭೀಕರ ರಸ್ತೆ ಅಪಘಾತ: ನಟಿ ಕಲ್ಯಾಣಿ ಕುರಾಳೆ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮರಾಠಿ ನಟಿ ಕಲ್ಯಾಣಿ ಕುರಾಳೆ ಸಾವನ್ನಪ್ಪಿದ್ದಾರೆ.

32 ವರ್ಷದ ಕಲ್ಯಾಣಿ ಪ್ರಯಾಣಿಸುತ್ತಿದ್ದ ಮೋಟಾರ್‌ ಸೈಕಲ್‌ ಗೆ ಕಾಂಕ್ರೀಟ್ ಮಿಕ್ಸರ್ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಅಪಘಾತದಲ್ಲಿಗಾಯಗೊಂಡ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆ ತಲುಪಿದಾಗ ಆಕೆ ಮೃತಪಟ್ಟಿದ್ದಾಳೆ . ಟ್ರ್ಯಾಕ್ಟರ್ ಚಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕೊಲ್ಲಾಪುರ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

‘ತುಜ್ಯಹತ್ ಜೀವ್ ರಂಗಾ’ ಟಿವಿ ಧಾರಾವಾಹಿಯಲ್ಲಿ ಕಲ್ಯಾಣಿ ಕುರಾಳೆ ಜಾಧವ್ ಕಾಣಿಸಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!