ಜಮಖಂಡಿಯಲ್ಲಿ ಭೀಕರ ಸರಣಿ ಅಪಘಾತ: ಅವಘಡದಲ್ಲಿ ಮೂವರ ದಾರುಣ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದ ಬಳಿ ಸಂಭವಿಸಿದ ಸರಣಿ‌ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಮಹಾಂತೇಶ್ ಹೊನಕಟ್ಟಿ (35) ಭೀಮಪ್ಪ ಗಂಟೆಣ್ಣವರ (೪೨), ಆನಂದ ಬಾಡಗಿ (22) ಮೃತ ದುರ್ದೈವಿಗಳು.

ನಸುಕಿನ ಜಾವ ಜಮಖಂಡಿ‌ಯಿಂದ ವಿಜಯಪುರಕ್ಕೆ ಟಾಟಾ ಏಸ್ ವಾಹನ ಹೊರಟಿತ್ತು. ಕಾರು ವಿಜಯಪುರದಿಂದ ಜಮಖಂಡಿಗೆ ಬರುತ್ತಿತ್ತು. ಕಾರು ಹಾಗೂ ಟಾಟಾ ಏಸ್ ವಾಹನ ಪರಸ್ಪರ ಡಿಕ್ಕಿಯಾಗಿವೆ. ಟಾಟಾ ಏಸ್ ವಾಹನಕ್ಕೆ ಹಿಂಬದಿಯಿದ್ದ ಎರಡು ಬೈಕಗಳು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!