ಜಮ್ಮುವಿನ ಜೈಲುಗಳ ಮೇಲೆ ಭಯೋತ್ಪಾದಕ ದಾಳಿ? ಭದ್ರತೆ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಮ್ಮು ಮತ್ತು ಕಾಶ್ಮೀರದ ಜೈಲುಗಳ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಇದೆ ಎಂದು ಮೂಲಗಳು ಸೂಚಿಸಿವೆ. ಇದರಿಂದಾಗಿ ಭದ್ರತೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಗುಪ್ತಚರ ಮಾಹಿತಿಯ ಪ್ರಕಾರ ಶ್ರೀನಗರ ಕೇಂದ್ರ ಜೈಲು ಮತ್ತು ಜಮ್ಮುವಿನ ಕೋಟ್ ಬಲ್ವಾಲ್ ಜೈಲುಗಳನ್ನು ಗುರಿಯಾಗಿಸಿ ದಾಳಿ ನಡೆಸಬಹುದು ಎಂದು ಅಂದಾಜಿಸಲಾಗಿದೆ.

ಈ ಜೈಲುಗಳಲ್ಲಿ ಪ್ರಸ್ತುತ ಭಯೋತ್ಪಾದಕರು ಹಾಗೂ ಭೂಗತ ಲೋಕದ ಕೊಲೆ ಪಾತಕಿಗಳಿದ್ದಾರೆ. ಅವರು ದಾಳಿಗಳಲ್ಲಿ ನೇರವಾಗಿ ಭಾಗಿಯಾಗದಿದ್ದರೂ ಸಹ, ಲಾಜಿಸ್ಟಿಕಲ್ ಸಹಾಯ, ಆಶ್ರಯ ಮತ್ತು ಅವರ ಓಡಾಟ ಸುಗಮಗೊಳಿಸುವ ಮೂಲಕ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಾರೆ.

26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದನಾ ತನಿಖೆಗೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ಸಂಸ್ಥೆಇತ್ತೀಚೆಗೆ ಸೇನಾ ವಾಹನ ದಾಳಿ ಪ್ರಕರಣಕ್ಕೂ ಸಂಬಂಧಿಸಿದ ನಿಸಾರ್ ಮತ್ತು ಮುಷ್ತಾಕ್ ಅವರನ್ನು ವಿಚಾರಣೆಗೆ ಒಳಪಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!