Thursday, September 29, 2022

Latest Posts

ಉಗ್ರರ ನಂಟು | ಶಿವಮೊಗ್ಗದಲ್ಲಿ ಶಂಕಿತ ಯುವಕರ ಬಂಧನ: ಎಸ್​ಪಿ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಶಿವಮೊಗ್ಗದಲ್ಲಿ ಶಂಕಿತ ಉಗ್ರರನ್ನು ಅರೆಸ್ಟ್‌ ಮಾಡಲಾಗಿದೆ.

ಶಿವಮೊಗ್ಗದಲ್ಲಿ ಕೂತು ರಾಜ್ಯದ ಹಲವೆಡೆ ಬಾಂಬ್‌ ಬ್ಲಾಸ್ಟ್‌ ಹಾಗೂ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ಐಸಿಎಸ್‌ ಉಗ್ರರ ಜತೆಗೆ ಮಂಗಳೂರು-ಶಿವಮೊಗ್ಗ ಲಿಂಕ್‌ ಕೂಡ ಹೊಂದಿದ ಒಟ್ಟು ಮೂವರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ.

ಮೂವರು ಶಂಕಿತರಾದ ಶಿವಮೊಗ್ಗದ ಸಿದ್ದೇಶ್ವರ ನಗರದ ನಿವಾಸಿ ಸಯ್ಯದ್ ಯಾಸೀನ್(21) ಹಾಗೂ ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್ (22) ಮತ್ತು ತೀರ್ಥಹಳ್ಳಿ ಸೂಪ್ಪುಗುಡ್ಡೆಯ ನಿವಾಸಿ ಶಾರೀಕ್ ಮೇಲೆ ಯುಎಪಿಎ 1967 ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ.

ಇದರಲ್ಲಿ ಸೈಯದ್ ಯಾಸೀನ್ ಹಾಗೂ ಮಾಜ್ ಮುನೀರ್ ಅಹಮ್ಮದ್​ನನ್ನು ಬಂಧಿಸಿ ವಿಚಾರಣೆ ನಡೆಸಿ, ಶಿವಮೊಗ್ಗದ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. ಕೋರ್ಟ್​​ಗೆ ಹಾಜರು ಪಡಿಸಿ 7 ದಿನ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್​ಪಿ ಲಕ್ಷ್ಮಿ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಇನ್ನು ಮಾಜ್ ಹಾಗೂ ಶಾರೀಕ್ ರವರು ಮಂಗಳೂರಿನಲ್ಲಿ ಗೋಡೆ ಬರಹ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಶಿವಮೊಗ್ಗದ ಪ್ರತಿಷ್ಠಿತ ಇಂಜಿನಿಯರ್ ಕಾಲೇಜಿನಲ್ಲಿ ಯಾಸೀನ್ ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗುತ್ತಿದೆ. ತೀರ್ಥಹಳ್ಳಿ ಸೊಪ್ಪು ಗುಡ್ಡೆಯ ಶಾರೀಕ್ ಎಂಬಾತ ಪರಾರಿಯಾಗಿದ್ದು, ಆತನ ವಶಕ್ಕೆ ಬಲೆ ಬೀಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!