ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಉಗ್ರರ ದಾಳಿ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ದೊಡ್ಡ ಭಯೋತ್ಪಾದನಾ ಸಂಚನ್ನು ಗಡಿ ಭದ್ರತಾ ಪಡೆ ಅಮೃತಸರ ಗಡಿಯಲ್ಲಿ ವಿಫಲಗೊಳಿಸಿದೆ.
ಅಮೃತಸರ ಜಿಲ್ಲೆಯ ಭರೋಪಾಲ್ ಗ್ರಾಮದ ಬಳಿ ಪಂಜಾಬ್ ಪೊಲೀಸರ ಸಮನ್ವಯದಲ್ಲಿ ಗಡಿ ಭದ್ರತಾ ಪಡೆ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿದ್ದು, ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳ ಸಂಗ್ರಹವನ್ನು ವಶಪಡಿಸಿಕೊಂಡಿದೆ.
ಬಿಎಸ್‌ಎಫ್ ಇಂಟಲಿಜೆನ್ಸ್ ವಿಂಗ್ ನೀಡಿದ ನಂಬಲಾರ್ಹ, ಗುಪ್ತಚರ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಬುಧವಾರ ಸಂಜೆ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದು, ಎರಡು ಹ್ಯಾಂಡ್ ಗ್ರೆನೇಡ್‌ಗಳು, ಮೂರು ಪಿಸ್ತೂಲ್‌ಗಳು, ಆರು ಮ್ಯಾಗಜೀನ್‌ಗಳು ಮತ್ತು 50 ಸುತ್ತಿನ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.