ಚಾಂಪಿಯನ್ಸ್ ಟ್ರೋಫಿ ಮೇಲೆ ಭಯೋತ್ಪಾದಕರ ಕರಿನೆರಳು: ವಿದೇಶಿಯರ ಅಪಹರಣಕ್ಕೆ ಸಂಚು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಗೆ ಭಯೋತ್ಪಾದಕ ದಾಳಿಯ ಆತಂಕ ಆವರಿಸಿದೆ. ಐಎಸ್‌ಕೆಪಿ ಭಯೋತ್ಪಾದಕ ಗುಂಪು ಚಾಂಪಿಯನ್ಸ್ ಟ್ರೋಫಿಯನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಬಂದಿರುವ ವಿದೇಶಿಗರನ್ನು ಅಪಹರಿಸಿ ಹಣ ಸುಲಿಗೆ ಮಾಡಲು ಸಂಚು ರೂಪಿಸಿವೆ ಎಂಬ ಮಾಹಿತಿ ಪಾಕ್ ಗುಪ್ತಚರ ಇಲಾಖೆಗೆ ಸಿಕ್ಕಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಭಯೋತ್ಪಾದಕ ಸಂಘಟನೆಯು ನಿರ್ದಿಷ್ಟವಾಗಿ ಚೀನೀ ಮತ್ತು ಅರಬ್ ಪ್ರಜೆಗಳನ್ನು ಗುರಿಯಾಗಿಸಿಕೊಂಡಿದ್ದು ಬಂದರುಗಳು (Port), ವಿಮಾನ ನಿಲ್ದಾಣಗಳು, ಕಚೇರಿಗಳು ಮತ್ತು ಈ ದೇಶಗಳ ಸಂದರ್ಶಕರು ಹೆಚ್ಚಾಗಿ ಬಳಸುವ ವಸತಿ ಪ್ರದೇಶಗಳಲ್ಲಿ ಕಣ್ಗಾವಲು ನಡೆಸುತ್ತಿದೆ ಎಂದು ಮಾಹಿತಿ ನೀಡಿದೆ.

ಭಯೋತ್ಪಾದಕ ದಾಳಿಯ ಭಯದಿಂದ ಪಾಕಿಸ್ತಾನದಲ್ಲಿ ಯಾವುದೇ ಮಹತ್ವದ ಈವೆಂಟ್​ಗಳನ್ನು ಆಯೋಜಿಸಲು ಐಸಿಸಿ ಹಿಂದೇಟು ಹಾಕುತ್ತಿತ್ತು. ಇದರ ಜೊತೆಗೆ ಲಂಕಾ ತಂಡದ ಮೇಲೆ ಭಯೋತ್ಪಾದಕರ ದಾಳಿ ನಡೆದ ಬಳಿಕ ಯಾವ ಕ್ರಿಕೆಟ್ ತಂಡವೂ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲು ಮುಂದೆ ಬರುತ್ತಿರಲಿಲ್ಲ. ಆದರೆ ಸೂಕ್ತ ಭದ್ರತೆ ಕಲ್ಪಿಸುವ ಭರವಸೆ ಸಿಕ್ಕ ಬಳಿಕ ಇದೀಗ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲಾಗುತ್ತಿದೆ.ಇದೀಗ ಟೂರ್ನಿ ಆರಂಭವಾಗಿ ಕೆಲವೇ ದಿನಗಳು ಕಳೆದಿರುವಾಗ ಈ ಟೂರ್ನಿಯ ಮೇಲೆ ಭಯೋತ್ಪಾದಕರ ಕರಿನೆರಳು ಆವರಿಸಿದೆ.

ಗುಪ್ತಚರ ವರದಿಗಳ ಪ್ರಕಾರ, ISKP ಕಾರ್ಯಕರ್ತರು ನಗರಗಳ ಹೊರವಲಯದಲ್ಲಿರುವ ಆಸ್ತಿಗಳನ್ನು ಸುರಕ್ಷಿತ ಮನೆಗಳಾಗಿ ಬಾಡಿಗೆಗೆ ಪಡೆಯಲು ಯೋಜಿಸಿದ್ದಾರೆ, ಕ್ಯಾಮೆರಾ ಕಣ್ಗಾವಲು ಇಲ್ಲದ ಮತ್ತು ರಿಕ್ಷಾ ಅಥವಾ ಮೋಟಾರ್ ಸೈಕಲ್ ಮೂಲಕ ಮಾತ್ರ ಪ್ರವೇಶಿಸಬಹುದಾದ ಸ್ಥಳಗಳನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿದ್ದಾರೆ. ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ಈ ಸಂಚು ರೂಪಿಸಿದ್ದಾರೆ.ಭಯೋತ್ಪಾದಕ ಗುಂಪು ನಿರ್ದಿಷ್ಟವಾಗಿ ಚೀನೀ ಮತ್ತು ಅರಬ್ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ದೇಶಗಳ ಸಂದರ್ಶಕರು ಆಗಾಗ್ಗೆ ಬಳಸುವ ಬಂದರುಗಳು, ವಿಮಾನ ನಿಲ್ದಾಣಗಳು, ಕಚೇರಿಗಳು ಮತ್ತು ವಸತಿ ಪ್ರದೇಶಗಳ ಮೇಲೆ ಕಣ್ಣಿಟ್ಟಿವೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.

ಭಾರತೀಯ ಏಜೆನ್ಸಿಗಳು ಕೂಡ ಇಂತಹ ದಾಳಿಯ ಸಾಧ್ಯತೆಯ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಿವೆ. ಇಸ್ಲಾಮಿಕ್ ಸ್ಟೇಟ್ – ಖೊರಾಸನ್ ಪ್ರಾಂತ್ಯದ (ISKP) ಭಯೋತ್ಪಾದಕರು ಚಾಂಪಿಯನ್ಸ್ ಟ್ರೋಫಿಯನ್ನು ವೀಕ್ಷಿಸಲು ಬರುವ ವಿದೇಶಿಯರನ್ನು ಅಪಹರಿಸಿ ಹಣ ಸುಲಿಗೆ ಮಾಡಲು ಮುಂದಾಗಿವೆ ಎಂಬ ಮಾಹಿತಿಯನ್ನು ಪಾಕ್ ಗುಪ್ತಚರ ಇಲಾಖೆಗೆ ಭಾರತೀಯ ಏಜೆನ್ಸಿಗಳು ನೀಡಿವೆ ಎಂದು ಹೇಳಲಾಗುತ್ತಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!