Monday, August 15, 2022

Latest Posts

ಜಮ್ಮು ಕಾಶ್ಮೀರದಲ್ಲಿ ಫೋಲೀಸರ ಮೇಲೆ ಭಯೋತ್ಪಾದಕರಿಂದ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಮ್ಮು ಕಾಶ್ಮೀರದಲ್ಲಿ ರಕ್ಷಣಾಪಡೆಯ ಪೋಲೀಸರ ಮೇಲೆಯೇ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಪೋಲೀಸ್‌ ಕಾನ್ಸ್ಟೇಬಲ್‌ ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರ ಜಿಲ್ಲೆಯ ಶ್ರೀಗುಫ್ವಾರದಲ್ಲಿರುವ ಅವರ ಹುಗಾಮ್ ಪ್ರದೇಶದ ಮನೆಯಲ್ಲಿ ಸಂಜೆ 7:30 ರ ಸುಮಾರಿಗೆ ಕಾನ್‌ಸ್ಟೆಬಲ್ ಫಿರ್ದೌಸ್ ಅಹ್ಮದ್ ಎಂಬುವವರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು ಘಟನೆಯಲ್ಲಿ ಕಾನ್ಸ್ಟೇಬಲ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಶ್ರೀಗುಫ್ವಾರಾ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರೆಯಲಾಗಿದ್ದು ಭಯೋತ್ಪಾದಕರನ್ನು ಹೊಡೆದುರುಳಿಸಲು ಜಾಲ ಬೀಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss