ಉಗ್ರರಿಂದ ಮಸೀದಿಯ ಮೇಲೆ ಗುಂಡಿನ ದಾಳಿ: 44 ಜನರು ಸಾವು, 13 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಸೀದಿಯ ಮೇಲೆ ಇಸ್ಲಾಂ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 44 ಜನರು ಬಲಿಯಾಗಿ 13 ಮಂದಿ ಗಾಯಗೊಂಡ ಘಟನೆ ನೈಋತ್ಯ ನೈಜರ್‌ನಲ್ಲಿನಡೆದಿದೆ.

ನೈಜರ್, ಬುರ್ಕಿನಾ ಫಾಸೊ ಮತ್ತು ಮಾಲಿಯ ತ್ರಿ-ಗಡಿ ಪ್ರದೇಶದ ಸಮೀಪದಲ್ಲಿರುವ ಕೊಕೊರೌ ಫೋಂಬಿಟಾ ಗ್ರಾಮದಲ್ಲಿ ಪ್ರಾರ್ಥನೆಯ ಸಮಯದಲ್ಲಿ ಈ ದಾಳಿ ನಡೆದಿದೆ.

ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆಯಾದ ಇಸ್ಲಾಮಿಕ್‌ ಸ್ಟೇಟ್‌ ಇನ್‌ ದಿ ಗ್ರೇಟರ್‌ ಸಹರಾ(ISGS) ಗುಂಪಿನ ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ದೇಶದ ರಕ್ಷಣಾ ಸಚಿವಾಲಯ ತಿಳಿಸಿದೆ.

ಮುಸ್ಲಿಮರ ಪವಿತ್ರ ರಂಜಾನ್ ತಿಂಗಳಲ್ಲಿ ಪ್ರಾರ್ಥನೆಗಾಗಿ ಜನರು ಸೇರಿದ್ದ ವೇಳೆ ಮಸೀದಿಯನ್ನು ಸುತ್ತುವರೆದು ಈ ಹತ್ಯಾಕಾಂಡ ನಡೆಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!