ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ಅಂತ್ಯಗೊಳಿಸಿದೆ. ಆಸ್ಟ್ರೇಲಿಯಾ ದಾಳಿಗೆ ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ದಿಟ್ಟ ಹೋರಾಟ ನಡೆಸಿದರೆ, ಇನ್ನುಳಿದವರಿಗೆ ರನ್ ಹರಿದು ಬರಲಿಲ್ಲ.
ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 296 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ 173 ರನ್ ಭಾರಿ ಹಿನ್ನಡೆ ಅನುಭಿವಿಸಿದೆ.
ಅಜಿಂಕ್ಯ ರಹಾನೆ 89 ರನ್ ಕಾಣಿಕೆ ನೀಡಿದರು. ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳಾದ ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ ಹಾಗೂ ವಿರಾಟ್ ಕೊಹ್ಲಿ ನಿರೀಕ್ಷಿತ ರನ್ ಸಿಡಿಸಲಿಲ್ಲ.
ರವೀಂದ್ರ ಜಡೇಜಾ 48 ರನ್ ಕಾಣಿಕೆ ನೀಡಿದರು. ಜಡೇಜಾ ವಿಕೆಟ್ ಪತನ ಬಳಿಕ ಅಜಿಂಕ್ಯ ರಹಾನೆ ಹಾಗೂ ಶಾರ್ದೂಲ್ ಠಾಕೂರ್ ಜೊತೆಯಾಟ ಕೆಲ ದಾಖಲೆಯನ್ನು ಬರೆಯಿತು ಶಾರ್ದೂಲ್ ಠಾಕೂರ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.