ಮುಂದಿನ 5 ವರ್ಷಗಳಲ್ಲಿ ಭಾರತದ ಜವಳಿ ಉತ್ಪನ್ನಗಳ ರಫ್ತಿನಲ್ಲಿ ಭಾರೀ ಏರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಂದಿನ 5 ವರ್ಷಗಳಲ್ಲಿ ಭಾರತದ ಜವಳಿ ಉತ್ಪನ್ನಗಳ ರಫ್ತು 100 ಶತಕೋಟಿ ಡಾಲರ್ ದಾಟಲಿದೆ ಎಂದು ಕೇಂದ್ರ ತಿಳಿಸಿದೆ.
ಈ ಮೂಲಕ ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿನ ಜವಳಿ ರಫ್ತು ಪ್ರಕ್ರಿಯೆ 40 ಶತಕೋಟಿ ಡಾಲರ್‌ ನಿಂದ 100 ಶತಕೋಟಿ ಡಾಲರ್‌ ಗೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಜವಳಿ ಸಚಿವಾಲಯ ತಿಳಿಸಿದೆ.
2022-2023ರ ಹಣಕಾಸು ವರ್ಷದಲ್ಲಿ 20 ಬಿಲಿಯನ್‌ ಡಾಲರ್‌ ನಷ್ಟು ಜವಳಿ ರಫ್ತು ಮಾಡುವ ಭರವಸೆ ಇದೆ ಎಂದು ಕೇಂದ್ರ ಜವಳಿ ಸಚಿವಾಲಯದ ಕಾರ್ಯದರ್ಶಿ ಉಪೇಂದ್ರ ಪ್ರಸಾದ್‌ ಸಿಂಗ್‌ ತಿಳಿಸಿದ್ದಾರೆ.
ದೇಶದಲ್ಲಿ ಜವಳಿ ಉದ್ಯಮವನ್ನು ಉತ್ತೇಜಿಸಲು ಪಿಎಲ್‌ ಐ ಯೋಜನೆಯನ್ನು ಕೇಂದ್ರೀಕರಿಸಲಾಗಿದೆ. ಜವಳಿ ಉದ್ಯಮದ ಹೆಚ್ಚು ಹೂಡಿಕೆಯ ಕೇಂದ್ರವಾಗಿಲ್ಲ. ಆದರೆ ಇದರಿಂದ ಉದ್ಯೋಗಾವಕಾಶ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!