‘ಜೈಲರ್’​ ಆಗಿ ಬರುತ್ತಿದ್ದಾರೆ ತಲೈವಾ: ರಾಜ್ಯ ರಾಜಧಾನಿಯಲ್ಲಿ ಸಿನಿಪ್ರಿಯರಿಗೆ ಟಿಕೆಟ್ ದರ ಏರಿಕೆಯ ಬಿಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳು ಸೂಪರ್​ಸ್ಟಾರ್​, ತಲೈವಾ ರಜಿನಿಕಾಂತ್​ ನಟನೆಯ ಬಹುನಿರೀಕ್ಷಿತ ‘ಜೈಲರ್’​ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ದೇಶದೆಲ್ಲೆಡೆ ಅಭಿಮಾನಿಗಳ ಕಾತುರ ಹೆಚ್ಚಾಗಿದ್ದು, ಟಿಕೆಟ್​ ಬುಕ್ಕಿಂಗ್​ ಕೂಡ ತೆರದಿದೆ.

ಇತ್ತ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಕೂಡ ಸಿನಿಮಾ ಟಿಕೆಟ್ ಗಾಗಿ ಜನ ಮುಗಿಬಿದ್ದಿದ್ದು,ಜನರಿಗೆ ದಿಢೀರ್​ ದರ ಏರಿಕೆಯ ಬಿಸಿ ಮುಟ್ಟಿಸಿದೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್’​ ಚಿತ್ರದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಕಾಣಿಸಿಕೊಂಡಿದ್ದು, ಸಹಸ್ರಾರು ಸಂಖ್ಯೆಯ ತಲೈವಾ ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಸಿನಿಪ್ರಿಯರು ನಾ ಮುಂದು ತಾ ಮುಂದು ಎಂದು ಟಿಕೆಟ್​ ಖರೀದಿ ಮಾಡಲು ದೌಡಾಯಿಸಿದ್ದಾರೆ. ಈ ವೇಳೆ ಕರ್ನಾಟಕದಲ್ಲಿ ಜೈಲರ್​ ಚಿತ್ರ ನೋಡಲು ಆಸೆ ಪಟ್ಟ ಸಿನಿಮಾ ಪ್ರೇಕ್ಷಕರಿಗೆ ಇದೀಗ ಶಾಕ್​ ಎದುರಾಗಿದ್ದು, ಜೈಲರ್​ ಟಿಕೆಟ್ ದರದಲ್ಲಿ ಭಾರೀ ಏರಿಕೆ ಮಾಡಲಾಗಿದೆ.

ಓಪನಿಂಗ್​ ದಿನವೇ ಜೈಲರ್​ ಚಿತ್ರದ 1090ಕ್ಕೂ ಹೆಚ್ಚು ಶೋಗಳು ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿದೆ. ಜೈಲರ್​ ಚಿತ್ರವು ಕೆಜಿಎಫ್ 2 (1037 ಶೋಗಳು) ಮತ್ತು ಅವತಾರ್: ದಿ ವೇ ಆಫ್ ವಾಟರ್ (1014 ಶೋಗಳು) ಚಿತ್ರಗಳ ಹಿಂದಿನ ದಾಖಲೆಗಳನ್ನು ಇದೀಗ ಹಿಂದಿಕ್ಕಿದೆ. ರಜನಿಕಾಂತ್ ಅವರ ಸಿನಿಮಾಗೆ ಅಭಿಮಾನಿಗಳು ತೀವ್ರ ಕುತೂಹಲ ವ್ಯಕ್ತಪಡಿಸಿದ್ದು, ಸಿನಿಮಾ ಬಿಡುಗಡೆಗಾಗಿ ತುದಿಗಾಲಿನಲ್ಲಿದ್ದಾರೆ.

ಇದರೊಟ್ಟಿಗೆ ಚಿತ್ರದ ಟಿಕೆಟ್​ ದರ ಮಲ್ಟಿಪ್ಲೆಕ್ಸ್​ಗಳಲ್ಲಿ ಭಾರೀ ದುಬಾರಿಯಾಗಿದ್ದು, 500, 700, 1000, 1500 ರೂ.ವರೆಗೂ ಏರಿಕೆ ಕಂಡಿದೆ. ಈ ವಿಚಾರ ಕನ್ನಡಿಗರನ್ನು ಕೆರಳಿಸಿದ್ದು, ಕನ್ನಡ ಸಿನಿಮಾಗಳಿಗೆ ಇಲ್ಲದ ಆದ್ಯತೆ, ಮನ್ನಣೆ ಅನ್ಯ ಭಾಷೆಯ ಸಿನಿಮಾಗಳಿಗೆ ಏಕೆ? ಟಿಕೆಟ್​ ದರದಲ್ಲಿ ಯಾಕಿಷ್ಟು ಹೆಚ್ಚಳ ಎಂದು ಪ್ರಶ್ನಿಸುವ ಮುಖೇನ ಕನ್ನಡ ಸಿನಿಪ್ರಿಯರು ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!