ಸಿಎಂ ಬೊಮ್ಮಾಯಿಗೆ ಜನ್ಮದಿನದ ಸಂಭ್ರಮ: ಪ್ರಧಾನಿ ಮೋದಿ, ಅಮಿತ್ ಶಾ ಶುಭಾಶಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಬೊಮ್ಮಾಯಿ ಸರ್ಕಾರಕ್ಕೆ ಎರೆಡೆರಡು ಸಂಭ್ರಮ. ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಆರು ತಿಂಗಳು ತುಂಬಿದೆ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜನ್ಮದಿನ. ಬೊಮ್ಮಾಯಿ ಅವರ ಜನ್ಮದಿನ ಹಾಗೂ ಸರ್ಕಾರಕ್ಕೂ ಆರು ತಿಂಗಳ ಜನ್ಮದಿನ. ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಗೃಹ ಸಚಿವ ಅಮಿತ್ ಶಾ ಜನ್ಮದಿನದ ಶುಭಾಶಯ ಕೋರಿದ್ದಾರೆ.

 

ಇನ್ನು ಮಾಜಿ ಸಿಎಂ ಬಿಎಸ್‌ವೈ ದೂರವಾಣಿ ಕರೆ ಮಾಡಿ ಶುಭ ಕೋರಿದ್ದಾರೆ. ತಮ್ಮ ನೇತೃತ್ವದ ಸರ್ಕಾರ ಯಶಸ್ವೀಯಾಗಿ ಆರು ತಿಂಗಳು ಪೂರೈಸಿದ ಖುಷಿಯಲ್ಲಿರುವ ಬೊಮ್ಮಾಯಿ ಅವರಿಗೆ ಶುಭಾಶಯಗಳ ಮಹಾಪೂರ ಹರಿದುಬಂದಿದೆ. ನಾಯಕರು ದಂಡು ಆರ್‌ಟಿ ನಗರದ ನಿವಾಸದ ಬಳಿ ಆಗಮಿಸಿದೆ.

ಈ ಬಗ್ಗೆ ಸಿಎಂ ಬೊಮ್ಮಾಯಿ ಮಾತನಾಡಿದ್ದು, ನಾನು ಹುಟ್ಟು ಹಬ್ಬ ಆಚರಿಸುವುದಿಲ್ಲ. ಎಲ್ಲರೂ ನನ್ನ ಜನ್ಮದಿನಕ್ಕೆ ಶುಭ ಕೋರಿದ್ದು ಸಂತಸ ತಂದಿದೆ. ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಶುಭಾಶಯಗಳಿಂದ ಇನ್ನಷ್ಟು ಹುಮ್ಮಸ್ಸು ಬಂದಿದೆ. ನನ್ನ ಸಂಪೂರ್ಣ ಚಿತ್ರ ರಾಜ್ಯದ ಅಭಿವೃದ್ಧಿ ಕಡೆ ಇದೆ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here