ಎಲೆಕ್ಟ್ರಾನಿಕ್ ವಸ್ತುಗಳ ರಫ್ತಿನಲ್ಲಿ ಏರುಮುಖ ಕಂಡಿದೆ ಭಾರತ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಏಪ್ರಿಲ್-ಡಿಸೆಂಬರ್ 2021ರ ಅವಧಿಯಲ್ಲಿ ಅದೇ ಅವಧಿಯ ಹಿಂದಿನ ವರ್ಷಕ್ಕೆ ಹೋಲಿಸಿದರೆ ಭಾರತದ ಎಲೆಕ್ಟ್ರಾನಿಕ್ಸ್ ವಸ್ತುಗಳ ರಫ್ತಿನ ಪ್ರಮಾಣ ಶೇ.49ರ ಬೆಳವಣಿಗೆ ಕಂಡಿದೆ.
ಅಮೆರಿಕ ಮತ್ತು ಯುಎಇಗಳು ಭಾರತದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಆಮದು ಮಾಡಿಕೊಂಡ ಪ್ರಮುಖ ದೇಶಗಳಾಗಿವೆ.

“2022ರ ವಿತ್ತೀಯ ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲೇ 11 ಬಿಲಿಯನ್ ಡಾಲರ್ ಮೊತ್ತದ ಎಲೆಕ್ಟ್ರಾನಿಕ್ ಉತ್ಪನ್ನಗಳು ರಫ್ತಾಗಿವೆ. ಹೀಗಾಗಿ ನಾವು ದಾಖಲೆಯತ್ತ ಸಾಗಿದ್ದೇವೆ” ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ದೇಶದ ಎಲೆಕ್ಟ್ರಾನಿಕ್ ಉತ್ಪನ್ನಗಳ ರಫ್ತಿನ ಪಟ್ಟಿಯಲ್ಲಿ ಭಾರತದಲ್ಲಿ ತಯಾರಾಗಿರುವ ಮೊಬೈಲ್ ಫೋನುಗಳು ಅಗ್ರಸ್ಥಾನದಲ್ಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!