Wednesday, November 29, 2023

Latest Posts

ಧನ್ಯನಾದೆನು ನಾನು…ಕೇರಳದಲ್ಲಿ ನಟಿ ಖುಷ್ಬೂವಿನ ಕಾಲು ತೊಳೆದು ನಾರಿ ಪೂಜೆ ಮಾಡಿದ ಅರ್ಚಕರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಟಿ, ಬಿಜೆಪಿ ನಾಯಕಿ , ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿಯೂ ಖುಷ್ಬೂ ಸುಂದರ್ ಕೇರಳಕ್ಕೆ ಭೇಟಿ ನೀಡಿದ್ದು ಇದೀಗ ಭಾರೀ ಸುದ್ದಿಯಾಗಿದೆ.

ಯಾಕೆಂದರೆ ನಟಿ ಖುಷ್ಬುರ (Khushboo) ಹಲವು ದೇವಾಲಯನ್ನು ಅವರ ಅಭಿಮಾನಿಗಳು ತಮಿಳುನಾಡು, ಆಂಧ್ರ-ತೆಲಂಗಾಣಗಳಲ್ಲಿ ನಿರ್ಮಿಸಿದ್ದಾರೆ. ಅಲ್ಲಿ ಪ್ರತಿನಿತ್ಯ ಅವರಿಗೆ ಪೂಜೆ ಸಹ ನಡೆಯುತ್ತದೆ. ಆದರೆ ಕೇರಳದಲ್ಲಿ ನಿಜವಾಗಿಯೂ ಖುಷ್ಬು ಪಾದ ತೊಳೆದು ಪೂಜೆ ಮಾಡಲಾಗಿದೆ. ಖುಷ್ಬುಗೆ ಅರ್ಚಕರು ಪೂಜೆ ಮಾಡಿರುವ ಚಿತ್ರಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇವರಿಗೆ ಕೇರಳದಲ್ಲಿ ನಾರಿ ಪೂಜೆ ಮಾಡಲಾಗಿದ್ದು, ಇವರ ಕಾಲನ್ನು ತೊಳೆದು ಪೂಜೆ ಸಲ್ಲಿಸಲಾಗಿದೆ. ಅಷ್ಟಕ್ಕೂ ನಾರಿ ಪೂಜೆ ಕೇರಳದಲ್ಲಿ ಮಾಮೂಲು. ಇಲ್ಲಿಯ ಕೆಲವು ಕಡೆಗಳಲ್ಲಿ ಮಹಿಳೆಯರನ್ನು ದೇವಿಯೆಂದು ಪರಿಗಣಿಸಿ ಪೂಜೆ ಮಾಡಲಾಗುತ್ತದೆ. ಕೇರಳದ ತ್ರಿಶೂರ್‌ನಲ್ಲಿರುವ ವಿಷ್ಣುಮಯ ದೇವಸ್ಥಾನದಲ್ಲಿ ಕೂಡ ಈ ಪದ್ಧತಿ ನಡೆದುಕೊಂಡು ಬಂದಿದೆ. ಈ ಬಾರಿ ನಟಿ, ರಾಜಕಾರಣಿ ಖುಷ್ಬೂ ಅವರನ್ನು ದೇವಿಗೆ ಪೂಜೆ ಸಲ್ಲಿಸುವಂತೆ ಕಾಲು ತೊಳೆದು ಸಂಪ್ರದಾಯದಂತೆ ಪೂಜೆಯನ್ನು ಮಾಡಲಾಗಿದೆ.

ಪೂಜೆಯ ಕುರಿತು ಮಾಹಿತಿ ಶೇರ್​ ಮಾಡಿಕೊಂಡಿರುವ ನಟಿ, ದೇವರಿಂದ ಆಶೀರ್ವಾದ ಸಿಕ್ಕಿದೆ. ತ್ರಿಶೂರ್‌ನ ವಿಷ್ಣುಮಯ ದೇವಸ್ಥಾನದಲ್ಲಿ ನಾರಿ ಪೂಜೆ ಮಾಡಲು ಕರೆದಿದ್ದು ನನ್ನ ಅದೃಷ್ಟ. ಕೆಲವರನ್ನು ಮಾತ್ರ ಆಯ್ಕೆ ಮಾಡಿ ಇಲ್ಲಿಗೆ ಕರೆಯಲಾಗುತ್ತೆ. ದೇವತೆಯೇ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ನಂಬುತ್ತಾರೆ. ದೇವಸ್ಥಾನ ಪ್ರತಿಯೊಬ್ಬರು ನನಗೆ ಆಶೀರ್ವಾದ ಮಾಡಿ ಗೌರವ ನೀಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ. ಈ ಆಚರಣೆಯಿಂದ ಇನ್ನೂ ಅನೇಕ ಒಳ್ಳೆಯ ವಿಷಯ ನಮ್ಮದಾಗುತ್ತದೆ. ನನ್ನ ಪ್ರೀತಿಪಾತ್ರರು ಮತ್ತು ಜಗತ್ತು ಸಂತೋಷ ಮತ್ತು ಶಾಂತಿಯುತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಧರ್ಮ, ಜಾತಿ ಎಲ್ಲವನ್ನೂ ಮೀರಿ ಈ ಆಚರಣೆ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ಈ ಆಚರಣೆಯನ್ನು ಪ್ರತಿ ವರ್ಷ ಧನು ಮಾಸದ ಮೊದಲ ಶುಕ್ರವಾರದಂದು ನಡೆಸಲಾಗುತ್ತದೆ. ದೇವಾಲಯದ ಪ್ರಧಾನ ಅರ್ಚಕರು ಸ್ವತಃ ಕುರ್ಚಿಯ ಮೇಲೆ ಕುಳಿತಿರುವ ಮಹಿಳೆಗೆ ಪೂಜೆಯನ್ನು ನಡೆಸುತ್ತಾರೆ ಮತ್ತು ಅವರ ಪಾದಗಳನ್ನು ತೊಳೆಯುತ್ತಾರೆ. ನಂತರ ಮಹಿಳೆಯರಿಗೆ ಮಾಲೆ ಹಾಕಿ ಪುಷ್ಪ ಅರ್ಪಿಸಲಾಗುತ್ತದೆ. ಪ್ರತಿ ವರ್ಷ ದೇವಾಲಯದ ಟ್ರಸ್ಟಿಗಳು ಗೌರವಾನ್ವಿತ ಅತಿಥಿಯನ್ನು ನಿರ್ಧರಿಸುತ್ತಾರೆ, ನಂತರ ಅವರನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವಾಲಯದಲ್ಲಿ ಪೂಜಿಸಲಾಗುತ್ತದೆ.

ಗಾಯಕಿ ಕೆಎಸ್ ಚಿತ್ರಾ ಮತ್ತು ಮಲಯಾಳಂ ನಟಿ ಮಂಜು ವಾರಿಯರ್ ಅವರಂತಹ ಅನೇಕ ಗಣ್ಯರನ್ನು ಈ ಹಿಂದೆ ಇದೇ ರೀತಿ ಪೂಜಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!