ಕಡಲ ತೀರದಲ್ಲಿ ಸಿಲಿಂಡರ್ ರೂಪದ ವಸ್ತು ಪತ್ತೆ!

ಹೊಸದಿಗಂತ ವರದಿ, ಕುಮಟಾ :

ಕಡಲ ತೀರದಲ್ಲಿ ಸಿಲಿಂಡರ್ ರೂಪದ ವಸ್ತುವೊಂದು ಪತ್ತೆಯಾಗಿ, ಸುತ್ತಲ ಸ್ಥಳೀಯರಲ್ಲಿ ಆತಂಕ ಮೂಡಿಸುವಂತೆ ಮಾಡಿದ ಘಟನೆ ಕುಮಟಾ ತಾಲೂಕಿನ ಬಾಡ ಗ್ರಾಮದ ಕಡಲ ತೀರದಲ್ಲಿ ನಡೆದಿದೆ.

ಸಮುದ್ರದ ಅಲೆಗಳು ಬರುವ ಸ್ಥಳದಲ್ಲಿ ಸಿಲಿಂಡರ್ ರೂಪದ ವಸ್ತು ಪತ್ತೆಯಾಗಿದೆ. ಇದನ್ನು ಕಂಡ ಸುತ್ತಮುತ್ತಲ ಜನರು ಒಮ್ಮೆ ಹೌಹಾರಿದರು. ನಂತರ ಈ ಬಗ್ಗೆ ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣದಲ್ಲಿ ಕರಾವಳಿ ಕಾವಲು ಪಡೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ತಂಡ ಸಹ ಸ್ಥಳಕ್ಕೆ ಆಗಮಿಸಿ ಸಿಕ್ಕಿದ ವಸ್ತುಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಪ್ರಾಥಮಿಕ ಪರಿಶೀಲನೆಯಿಂದ ಇದು ಯಾವ ವಸ್ತು ಎಂಬುದರ ನಿಖರ ಮಾಹಿತಿ ಲಭ್ಯವಾಗಿಲ್ಲ. ಇದು ಮರ್ಚೆಂಟ್ ಶಿಪ್ ನಲ್ಲಿರುವ ವಸ್ತು ಎಂದು ಕೆಲ ಮೂಲಗಳು ತಿಳಿಸಿದೆ ಎನ್ನಲಾಗಿದೆ. ಆಳ ಸಮುದ್ರದಲ್ಲಿ ಯಾವುದೋ ಒಂದು ಬೋಟ್/ಶಿಪ್ ಮುಳುಗಡೆಯಾಗಿರಬಹುದು ಅದರಲ್ಲಿರುವ ಸಿಲಿಂಡರ್ ರೂಪದ ಈ ವಸ್ತು ಕಡಲ ಅಲೆಗೆ ಕೊಚ್ಚಿಕೊಂಡು ಸಮುದ್ರದ ತೀರದಕ್ಕೆ ಬಂದು ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಅಗ್ನಿಶಾಮಕ ಅಕಾರಿಗಳು ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಲೆಂಡರ್ ಅದರೊಳಗಿದ್ದ ದ್ರವರೂಪದ ವಸ್ತು ಹೊರಹೋಗಿದ್ದು, ಭಯಪಡುವ ಅಗತ್ಯವಿಲ್ಲವೆಂದು ಅಕಾರುಗಳು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!