ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಸಿನಿಮಾರಂಗದ ಕರಾಳ ಸತ್ಯಗಳು ಒಂದು ಒಂದಾಗಿ ಹೊರ ಬರುತ್ತಿದೆ. ಇದೀಗ 16ನೇ ವಯಸ್ಸಿಗೆ ಸಿನಿಮಾ ಜರ್ನಿ ಆರಂಭಿಸಿದ ನಟಿ ಅಶ್ವಿನಿ ಕೂಡ ಕೆಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.
ಕಳೆದ ವರ್ಷ ನಾನು ಟಿವಿ ಶೋನಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೆ. ನಾನು ಇದನ್ನು ಕಾಸ್ಟಿಂಗ್ ಕೌಚ್ ಅಂತ ಕರೆಯುವುದಿಲ್ಲ. ಆದರೆ ನಾನು ದೊಡ್ಡ ಟ್ರಾಪ್‌ನಲ್ಲಿ ಸಿಲುಕಿಕೊಂಡಿದ್ದೆ. ನಾನು ಆ ವ್ಯಕ್ತಿಯ ಹೆಸರನ್ನು ಹೇಳುವುದಿಲ್ಲ. ನಾನು ಯಾರಿಗೂ ನೋವು ಕೊಡುವುದಕ್ಕೆ ಇಷ್ಟ ಪಡುವುದಿಲ್ಲ , ನಾನು ಆತನನ್ನು ಕ್ಷಮಿಸಿದ್ದೇನೆ. ಅವರು ಜನಪ್ರಿಯ ನಿರ್ದೇಶಕರು. ಸಿನಿಮಾಗೆ ಸಂಬಂಧಪಟ್ಟಂತೆ ಚರ್ಚೆ ಮಾಡುವುದಕ್ಕೆ ಅವರು ಆಫೀಸ್‌ಗೆ ಬರುವಂತೆ ಹೇಳಿದರು. ಯಾವಾಗಲೂ ನನ್ನ ತಾಯಿ ನನ್ನ ಜೊತೆಗೆ ಬರುತ್ತಿದ್ದರು ಆದರೆ ಅಂದು ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ನನ್ನ ಸಹಾಯಕಿಯನನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದೆ’ ಎಂದು ತಮಿಳು ಯೂಟ್ಯೂಬ್ ಸಂದರ್ಶನದಲ್ಲಿ ಅಶ್ವಿನಿ ಮಾತನಾಡಿದ್ದಾರೆ.
ಆ ನಿರ್ದೇಶಕನ ಆಫೀಸ್ ಇದ್ದಿದ್ದು ಚೆನ್ನೈನಲ್ಲಿ ಇರುವ ಅವರ ಮನೆ ಬಳಿಯೇ. ಹೀಗಾಗಿ ಆಫೀಸ್‌ಗೆ ಹೋಗಿದ್ದೆ. ‘ಮೇಲಿನ ಮಹಡಿಗೆ ಹೋಗುತ್ತಿದ್ದಂತೆ ಬೆಡ್ ರೂಮ್‌ನಿಂದ ಒಳಗೆ ಬಾ ಅನ್ನೋ ಧ್ವನಿ ಕೇಳಿಸಿತ್ತು. ನಾನು ಯಾವುದೇ ಅಳುಕಿಲ್ಲ ರೂಮ್ ಒಳಗೆ ಹೋಗಿದೆ ಏಕೆಂದರೆ ಆ ಹಿಂದೆ ಮಲಯಾಳಂ ಸಿನಿಮಾದಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೆ. ನನಗೆ ಅವರು ಗೊತ್ತಿದ್ದರಿಂದ ನಾನು ಹೆಚ್ಚಾಗಿ ಏನೂ ಯೋಚನೆ ಮಾಡುವುದಕ್ಕೆ ಹೋಗಲಿಲ್ಲ. ಆಗ ನನಗೆ ಅಷ್ಟೋಂದು ಯೋಚನೆ ಮಾಡುವ ಪ್ರಬದ್ಧತೆ ಇರಲಿಲ್ಲ ಎಂದು ಅಶ್ವಿನಿ ಹೇಳಿದ್ದಾರೆ.
ಬೆಡ್ ರೂಮ್‌ಗೆ ಹೋಗುತ್ತಿದ್ದಂತೆ ಆ ನಿರ್ದೇಶಕ ಅನುಚಿತವಾಗಿ ವರ್ತಿಸುವುದಕ್ಕೆ ಶುರು ಮಾಡಿದೆ. ಖುಷಿಯಿಂದ ಮೇಲಿನ ಮಹಡಿಗೆ ಹೋಗಿದ್ದ ಹುಡುಗಿ ಅದೇ ಖುಷಿಯಿಂದ ಹಿಂತಿರುಗಲಿಲ್ಲ. ನನಗೆ ಅಲ್ಲಿ ಏನಾಯ್ತು ಎಂಬುದು ನಂಬುವುದಕ್ಕೂ ಆಗುತ್ತಿರಲಿಲ್ಲ. ತಕ್ಷಣವೇ ಅಲ್ಲಿಂದ ಮನೆಗೆ ಹೊರಟು ಬಂದೆ ಆದರೆ ನನ್ನ ಅಮ್ಮನಿಗೂ ಏನೋ ಆಗಿದೆ ಅನ್ನೋ ಗೊತ್ತಿತ್ತು’ ಎಂದಿದ್ದಾರೆ.