ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಅತ್ತ ರಾಜಕಾರಣಿಗಳು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಈ ವೇಳೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ರಾಜಕೀಯಕ್ಕೆ ಎಂಟ್ರಿ ಕೊಡುವ ಸುಳಿವು ನೀಡಿದ್ದಾರೆ.
ನಟ ಚಂದನ್ ಅವರ ಮಾಲೀಕತ್ವದ ಮಂಡಿಪೆಟ್ ತಟ್ಟೆ ಇಡ್ಲಿ ಉದ್ಘಾಟನೆ ಮಾಡಿದ ಕಿಚ್ಚ ಸುದೀಪ್ ನಂತರ ಮಾತನಾಡಿದರು. ಈಗ ಹೋಟೆಲ್ ಉದ್ಘಾಟನೆಗೆ ಬರ್ತೀನೋ, ಇಲ್ಲವೋ ಅಂದುಕೊಂಡಿದ್ರು. ಆದರೆ ನಾನು ಬಂದೆ. ಅದೇ ಥರಾ ರಾಜಕಾರಣಕ್ಕೂ ಈ ಥರಾ ಬರ್ತೀನೋ ಇಲ್ಲವೋ ಅನ್ನೋ ಗೊಂದಲದ ವಿಚಾರ ಓಡಾಡ್ತಿದೆ. ನಾನು ರಾಜಕಾರಣಕ್ಕೆ ಬಂದಾಗ ಗೊತ್ತಾಗುತ್ತೆ ಎಂದಿದ್ದಾರೆ. ಇದೀಗ ಈ ಹೇಳಿಕೆ ಸಾಕಷ್ಟು ಗೊಂದಲ ಸೃಷ್ಟಿಸಿದೆ.
ಇನ್ನೂ ಯಾರೂ ಬಂದು ಕರೆದಿಲ್ಲ. ಯಾರಾದರೂ ಕರೆದರೆ ನೋಡ್ತೀನಿ. ಸದ್ಯಕ್ಕೆ ಸಿನಿಮಾ ಕಡೆ ಒಲವಿದೆ. ಎಂದು ಹೇಳಿಕೆ ನೀಡಿದ್ದಾರೆ.