ದೆಹಲಿಯ 75 ಸ್ಥಳಗಳಲ್ಲಿ 115 ಅಡಿ ಎತ್ತರದ ತ್ರಿವರ್ಣ ಧ್ವಜ ಹಾರಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಇಂದು 75 ಸ್ಥಳಗಳಲ್ಲಿ 115 ಅಡಿ ಎತ್ತರದ ತ್ರಿವರ್ಣ ಧ್ವಜ ಹಾರಲಿದೆ.

ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನು ಆಚರಿಸಲು ದೆಹಲಿ ಸರ್ಕಾರ, ಇಂದು ರಾಷ್ಟ್ರ ರಾಜಧಾನಿಯ 75 ಸ್ಥಳಗಳಲ್ಲಿ ರಾಷ್ಟ್ರಧ್ವಜ ಹಾರಿಸಲಿದೆ. ಇದರಿಂದ ಕೋಟ್ಯಂತರ ಜನರಲ್ಲಿ ದೇಶಭಕ್ತಿ ಮೂಡುತ್ತದೆ, ಹೆಮ್ಮೆಯ ಭಾವನೆ ನಮ್ಮದಾಗುತ್ತದೆ ಎಂದು ಪಿಡಬ್ಲ್ಯುಡಿ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.

ದೆಹಲಿಯಲ್ಲಿ 500 ಸ್ಥಳಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಯೋಜನೆ ಇದಾಗಿದೆ, ಇಂದು 75 ಸ್ಥಳಗಳಲ್ಲಿ ಧ್ವಜ ಹಾರಾಡುತ್ತದೆ. ಮಾರ್ಚ್ 31ರ ಒಳಗೆ 500 ಧ್ವಜ ಹಾರಿಸುವ ಗುರಿ ಇದೆ ಎಂದಿದ್ದಾರೆ. ಉದ್ಯಾನವನಗಳು, ಶಾಲೆ, ಮಾರ್ಕೆಟ್, ಸಂಕೀರ್ಣ, ವಸತಿ ಪ್ರದೇಶ ಹಾಗೂ ತೆರೆದ ಮೈದಾನಗಳಲ್ಲಿ ಧ್ವಜ ಹಾರಾಡಲಿದೆ. ದೆಹಲಿ ಸರ್ಕಾರದ ದೇಶಭಕ್ತಿ ಬಜೆಟ್‌ನ ಅನ್ವಯ ಈ ಕಾರ್ಯಕ್ರಮ ಜಾರಿಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!