ಹೊಸದಿಗಂತ ವರದಿ ವಿಜಯಪುರ:
ಜೈಲಿನಲ್ಲಿರುವ ಕೈದಿಗೆ ಅಕ್ರಮವಾಗಿ ಮೊಬೈಲ್ ನೀಡಲು ಬಂದಿದ್ದ ಅರೋಪಿಯನ್ನು ಜೈಲಿನ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿರುವ ಘಟನೆ ನಗರ ಹೊರ ವಲಯ ದರ್ಗಾ ಜೈಲ್ ಆವರಣದಲ್ಲಿ ನಡೆದಿದೆ.
ತೌಫಿಕ್ ರಫೀಕ್ ಮುಜಾವರ್ ಬಂಧಿತ ಆರೋಪಿ. ಇನ್ನೂ ಕೈದಿ ಸಾಧಿಕ್ ಇನಾಮದಾರ್‌ಗೆ ಅಕ್ರಮವಾಗಿ ಜೈಲ್ ಆವರಣದಿಂದ ಜೈಲ್ ಒಳಗೆ ಮೊಬೈಲ್ ಎಸೆಯಲು ಬಂದಾಗ ಜೈಲ್ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.