ಹೊಸದಿಗಂತ ವರದಿ ವಿಜಯಪುರ:
ರೈಲ್ವೆ ಗೂಡ್ಸ್ ಬೋಗಿಗಳು ಕಟ್ಟಾಗಿ ಬಿದ್ದಿರುವ ಘಟನೆ ಜಿಲ್ಲೆಯ ಕೊಲ್ಹಾರ ಪಟ್ಟಣದ ಮುಳವಾಡ ರೈಲು ನಿಲ್ದಾಣ ಬಳಿ ನಡೆದಿದೆ.
ಏಕಾಏಕಿ ರೈಲ್ವೆಯ ಆರು ಬೋಗಿಗಳು ಕಟ್ ಆಗಿದ್ದು, ಆರು ಬೋಗಿಗಳು ಟ್ರ್ಯಾಕ್ ನಿಂದ ಹೊರಗಡೆಗೆ ಬಿದ್ದಿವೆ.
ವಿಜಯಪುರ ರೈಲ್ವೆ ಪೊಲೀಸರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.